ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಷನ್‌ ಶಕ್ತಿ ಪ್ರಯೋಗ: ‘ತ್ಯಾಜ್ಯದ ಸಮಸ್ಯೆ ಉಂಟಾಗದು’–ಭಾರತ ಸ್ಪಷ್ಟನೆ

Last Updated 28 ಮಾರ್ಚ್ 2019, 18:47 IST
ಅಕ್ಷರ ಗಾತ್ರ

ಮಿಯಾಮಿ (ಅಮೆರಿಕ): ‘ಎಸ್ಯಾಟ್’ ಉಪಗ್ರಹ ಹೊಡೆದುರುಳಿಸುವ ಕ್ಷಿಪಣಿ ಪರೀಕ್ಷಾರ್ಥಪ್ರಯೋಗವು ಭೂಮಿಯ ಕೆಳ ಕಕ್ಷೆಯಲ್ಲಿ ನಡೆದ ಕಾರಣ ಬಾಹ್ಯಾಕಾಶದಲ್ಲಿ ತ್ಯಾಜ್ಯದ ಸಮಸ್ಯೆ ಉಂಟಾಗದು. ಎಸ್ಯಾಟ್ ಹೊಡೆದುರುಳಿಸಿದ ಉಪಗ್ರಹದ ತುಣುಕುಗಳುಕೆಲವೇ ವಾರಗಳಲ್ಲಿ ಭೂಮಿಗೆ (ಉರಿದು ಬೂದಿಯಾಗಿ) ಬೀಳಲಿವೆ ಎಂದು ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಹೇಳಿದೆ.

‘ಯಾವುದೇ ದೇಶದ, ಯಾವುದೇ ಪ್ರಯೋಗವೂಬಾಹ್ಯಾಕಾಶವನ್ನು ಅಸ್ಥಿರಗೊಳಿಸಬಾರದು. ಇಂಥ ಬೆಳವಣಿಗೆಗಳನ್ನು ಸಹಿಸಲು ಆಗುವುದಿಲ್ಲ. ಉಪಗ್ರಹಗಳನ್ನು ಹೊಡೆದುರುಳಿಸುವ ಎಸ್ಯಾಟ್‌ ಪ್ರಯೋಗಗಳಿಂದ ಬಾಹ್ಯಾಕಾಶದಲ್ಲಿ ತ್ಯಾಜ್ಯದ ಅನಿಯಂತ್ರಿತ ತುಣುಕುಗಳ ಸಮಸ್ಯೆ ಉಂಟಾಗುವ ಅಪಾಯವಿದೆ’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶಾನ್‌ಹನ್ಆಕ್ಷೇಪದ ದನಿ ಎತ್ತಿದ ಹಿನ್ನೆಲೆಯಲ್ಲಿ ಭಾರತ ವಿದೇಶಾಂಗ ಇಲಾಖೆಯ ಪ್ರತಿಕ್ರಿಯೆ ಮಹತ್ವ ಪಡೆದುಕೊಂಡಿದೆ.

ಭಾರತ ಬುಧವಾರ ಮಿಷನ್‌ ಶಕ್ತಿ ಪರೀಕ್ಷಾರ್ಥ ಪ್ರಯೋಗ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ಯಾಟ್ರಿಕ್ ಶಾನ್‌ಹನ್, ‘ಭಾರತದಂತೆ ಮುಂದಿನ ದಿನಗಳಲ್ಲಿ ಉಪಗ್ರಹ ನಿರೋಧಕ ಕ್ಷಿಪಣಿಗಳನ್ನು ಪರೀಕ್ಷಿಸಲು ಇಚ್ಛಿಸುವಯಾವುದೇ ದೇಶವು ಬಾಹ್ಯಕಾಶ
ದಲ್ಲಿ ಅನಾಹುತ ಉಂಟಾಗದಂತೆ ಎಚ್ಚರಿಕೆಯಿಂದ ವರ್ತಿಸಬೇಕು. ಇಂಥ ಪ್ರಯೋಗಗಳ ನಂತರ ಬಾಹ್ಯಾಕಾಶದಲ್ಲಿ ಉಪಗ್ರಹ ತ್ಯಾಜ್ಯಗಳುಅಪಾಯ ಉಂಟುಮಾಡಬಹುದು’ ಎಂದು ಹೇಳಿದ್ದರು.

‘ಭಾರತದ ಮಿಷನ್‌ ಶಕ್ತಿ ಪ್ರಯೋಗದಿಂದ ಬಾಹ್ಯಾಕಾಶದಲ್ಲಿ ಉಪಗ್ರಹ ತ್ಯಾಜ್ಯದ ಸಮಸ್ಯೆ ಉಂಟಾಗಲಿದೆಯೇ?’ ಎನ್ನುವ ಪ್ರಶ್ನೆಗೆ ಶಾನ್‌ಹನ್ನೇರ ಉತ್ತರ ನೀಡಲಿಲ್ಲ. ‘ಭಾರತ ಪ್ರಯೋಗದ ಪರಿಣಾಮಗಳನ್ನು ಅಮೆರಿಕ ಗಮನಿಸುತ್ತಿದೆ’ ಎಂದಷ್ಟೇ ಪ್ರತಿಕ್ರಿಯಿಸಿದರು.

‘ನಾವೆಲ್ಲರೂ ಬದುಕುವ, ನಮ್ಮೆಲ್ಲರ ಬದುಕಿಗೆ ಅತ್ಯಗತ್ಯವಾಗಿ ಬೇಕಿರುವಬಾಹ್ಯಾಕಾಶವನ್ನು ತಿಪ್ಪೆಗುಂಡಿ ಮಾಡುವುದು ಬೇಡ. ಬಾಹ್ಯಾಕಾಶ ಎನ್ನುವುದು ವ್ಯಾಪಾರದ ಸ್ಥಳ, ಬಾಹ್ಯಕಾಶದಲ್ಲಿ ಯಾರು ಬೇಕಾದರೂ ಮುಕ್ತವಾಗಿ ವ್ಯವಹಾರ ನಡೆಸಲು ಅವಕಾಶ ಇರಬೇಕು’ ಎಂದು ಹೇಳಿದ್ದರು.

‘ಬಾಹ್ಯಾಕಾಶದ ಮೇಲಿನ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಬಾಹ್ಯಾಕಾಶದಲ್ಲಿ ವಿವಿಧ ದೇಶಗಳು ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದಕ್ಕೆ ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳಿಲ್ಲ. ನಿಯಮಗಳ ಇಲ್ಲದಿರುವ ಸನ್ನಿವೇಶದಲ್ಲಿ ವಿಜ್ಞಾನಿಗಳು ತಂತ್ರಜ್ಞಾನವನ್ನು ಹೇಗೆ ಅಭಿವೃದ್ಧಿಪಡಿಸುತ್ತಾರೆ ಮತ್ತು ಪರೀಕ್ಷಿಸುತ್ತಾರೆ. ಅಂತರರಾಷ್ಟ್ರೀಯ ಸಮುದಾಯ ಶೀಘ್ರ ಇತ್ತ ಗಮನಕೊಡಬೇಕಿದೆ. ಯಾವ ದೇಶ ನಡೆಸುವ ಪರೀಕ್ಷೆಯೂ ಇನ್ನೊಂದು ದೇಶದ ಹಿತಾಸಕ್ತಿಯನ್ನು ಅಪಾಯಕ್ಕೆ ದೂಡಬಾರದು’ ಎಂದು ಶಾನ್‌ಹನ್ ಅಭಿಪ್ರಾಯಪಟ್ಟರು.

ಭಾರತ ದೀರ್ಘ ಹಾದಿ ಕ್ರಮಿಸಬೇಕಿದೆ’

ವಾಷಿಂಗ್ಟನ್ (ಪಿಟಿಐ): ಬಾಹ್ಯಾಕಾಶ ರಕ್ಷಣೆ ವಿಷಯದಲ್ಲಿ ಭಾರತ ಇನ್ನೂ ದೀರ್ಘ ಹಾದಿ ಕ್ರಮಿಸಬೇಕಿದೆ ಎಂದು ಅಮೆರಿಕದ ಪ್ರಮುಖ ಬಾಹ್ಯಾಕಾಶ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಾಹ್ಯಾಕಾಶದಲ್ಲಿರುವ ಉಪಗ್ರಹವನ್ನು ಹೊಡೆದು ಉರುಳಿಸುವ ಉಪಗ್ರಹ ನಿರೋಧಕ ಕ್ಷಿಪಣಿಯ ಪರೀಕ್ಷೆಯನ್ನು ಭಾರತ ಬುಧವಾರ ಯಶಸ್ವಿಯಾಗಿ ಪೂರೈಸಿದ ಬೆನ್ನಲ್ಲೇ ಈ ಅಭಿಪ್ರಾಯ ವ್ಯಕ್ತವಾಗಿದೆ.

ಶತ್ರು ಉಪಗ್ರಹಗಳನ್ನು ಹೊಡೆದು ಉರುಳಿಸುವ ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಅಮೆರಿಕ, ರಷ್ಯಾ ಹಾಗೂ ಚೀನಾ ನಂತರ ಭಾರತ ಇದೀಗ ನಾಲ್ಕನೇ ಸ್ಥಾನ ಪಡೆದಿದೆ.

‘ಚೀನಾ 2007ರಲ್ಲಿ ಉಪಗ್ರಹ ಹೊಡೆದುರುಳಿಸುವ ಕ್ಷಿಪಣಿ ಪರೀಕ್ಷೆ ನಡೆಸಿದ ನಂತರದಲ್ಲಿ ಭಾರತ ಸಹ ತನ್ನದೇ ಆದ ಕ್ಷಿಪಣಿ ನಿರ್ಮಾಣದಲ್ಲಿ ತೊಡಗಿತ್ತು. ಭವಿಷ್ಯದಲ್ಲಿ ಭಾರತದ ಬಾಹ್ಯಾಕಾಶದಲ್ಲಿ ಚೀನಾ ದಾಳಿನಡೆಸುವುದನ್ನು ಎದುರಿಸುವುದು ಇದರ ಗುರಿಯಾಗಿತ್ತು. ಈ ಪರೀಕ್ಷೆಯಿಂದ ಆ ಗುರಿ ಈಡೇರಿದೆ. ಆದರೆ ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಭಾರತಮತ್ತಷ್ಟು ಶ್ರಮಿಸಬೇಕಿದೆ’ ಎಂದು ಚಿಂತನ ಚಾವಡಿ ಕಾರ್ನಿಗಿ ಎಂಡೋಮೆಂಟ್‌ನ ಹಿರಿಯ ತಜ್ಞೆ ಆ್ಯಶ್ಲೆ ಜೆ ಟೆಲಿಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT