ನವದೆಹಲಿ: ಥಾಯ್ಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ದೊರೆ ಮಹಾ ವಾಜಿರಲೊಂಗ್ಕೋರ್ನ್ ಅವರನ್ನು ಶುಕ್ರವಾರ ಭೇಟಿಯಾದರು. ಧ್ಯಾನಮುದ್ರದ ಸಾರನಾಥ ಬುದ್ಧನ ಮೂರ್ತಿಯನ್ನು ಹಾಗೂ ಥಾಯ್ ರಾಣಿಗೆ ರೇಷ್ಮೆ ಶಾಲನ್ನು ಉಡೊಗುರೆಯಾಗಿ ನೀಡಿದರು.

ಭಾರತೀಯ ಕಲಾಕೃತಿ ಶೈಲಿಯಲ್ಲಿರುವ ಸಾರನಾಥ ಮೂರ್ತಿಯು ಬೌದ್ಧ ಧಾರ್ಮಿಕದ ಪ್ರತೀಕದಂತಿದೆ. ಬಿಹಾರ ಮೂಲದ ಈ ಕಲಾಕೃತಿಯು ಗುಪ್ತಾ ಮತ್ತು ಪಾಲ ಕಲಾ ಸಂಪ್ರದಾಯದ ಮಿಶ್ರಣವಾಗಿದೆ. ಬುದ್ಧನ ಮೈಮೇಲಿನ ವಸ್ತ್ರ ಮತ್ತು ಕಮಲದ ದಳಗಳು ಮೂರ್ತಿಯ ಕಳೆಯನ್ನು ಇನ್ನಷ್ಟು ಹೆಚ್ಚಿಸಿವೆ. ಪದ್ಮಾಸನದಲ್ಲಿ ಧ್ಯಾನಮುದ್ರನಾಗಿ ಕುಳಿತಿರುವ ಬುದ್ಧನ ಮೂರ್ತಿ ಜ್ಞಾನ ಮತ್ತು ಸಹಾನುಭೂತಿಯನ್ನು ಸಾರುವಂತಿದೆ.

ಉತ್ತರ ಪ್ರದೇಶದ ವಾರಾಣಸಿಯ ರೇಷ್ಮೆ ಶಾಲಿನಲ್ಲಿ ಭಾರತೀಯ ಶೈಲಿಯ ಸೂಕ್ಷ್ಮ ನೇಯ್ಗೆಯ ಕಲಾಕೃತಿಗಳಿವೆ. ನಿಸರ್ಗದ ಚಿತ್ರಣ, ಗ್ರಾಮೀಣ ಜೀವನದ ಚಿತ್ರಗಳನ್ನು ಬಿಂಬಿಸುವ ಪಿಚವಾಯಿ ಕಲಾಕೃತಿಯನ್ನು ಹೊಂದಿದೆ.

ಥಾಯ್ ಪ್ರಧಾನಿ ಪೆಟೊಂತಾರ್ನ್ ಶಿನೊವಾರ್ಥ್ ಅವರಿಗೆ ಡೋಕ್ರಾ ಕಲಾಕೃತಿಯ ಕಂಚಿನ ನವಿಲು ಮಾದರಿಯ ದೋಣಿಯ ಪ್ರತಿಕೃತಿಯನ್ನು ನೀಡಿದರು. ಅವರ ಪತಿಗೆ ಚಿನ್ನ ಹಾಗೂ ಬೆಳ್ಳಿ ಮಿಶ್ರಿತ ಕಫ್ಲಿಂಕ್ ಅನ್ನು ಉಡುಗೊರೆಯಾಗಿ ನೀಡಿದರು. ಛತ್ರೀಸಘಡದ ಡೋಕ್ರಾ ಕಲಾಕೃತಿ ಇದಾಗಿದೆ.

ಮಾಜಿ ಪ್ರಧಾನಿ ಥಾಕ್ಸಿನ್ ಶಿನೊವಾರ್ಥ್ ಅವರಿಗೆ ನವಿಲಿನ ಕಲಾಕೃತಿಯ ಕಂಚಿನ ಉರ್ಲಿ ಮತ್ತು ದೀಪವನ್ನು ಉಡುಗೊರೆಯಾಗಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.