ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಂತ್ರಣಕ್ಕೆ ಸಿಗದ ಕಾಳ್ಗಿಚ್ಚು: ಸಾವಿರಾರು ಜನರ ಸ್ಥಳಾಂತರ

Published 19 ಆಗಸ್ಟ್ 2023, 14:00 IST
Last Updated 19 ಆಗಸ್ಟ್ 2023, 14:00 IST
ಅಕ್ಷರ ಗಾತ್ರ

ಟೆನೆರಿಫ್‌, ಕ್ಯಾನರಿ ಐಲೆಂಡ್ಸ್‌, ಸ್ಪೇನ್‌ : ಸ್ಪೇನ್‌ನ ಟೆನೆರಿಫ್‌ ದ್ವೀಪದ ಉತ್ತರದಲ್ಲಿ ಹಬ್ಬಿರುವ ಕಾಳ್ಗಿಚ್ಚು ನಿಯಂತ್ರಣಕ್ಕೆ ಬಾರದ ಕಾರಣ ಶನಿವಾರ ಬೆಳಿಗ್ಗೆ ಸಾವಿರಾರು ಜನರನ್ನು ತಮ್ಮ ಮನೆಗಳಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ಬಿಸಿ ಮತ್ತು ಶುಷ್ಕ ವಾತಾವರಣದ ನಡುವೆ ಸ್ಪೇನ್‌ನ ಅತಿ ಎತ್ತರದ ಶಿಖರ ಮೌಂಟ್ ಟೀಡೆ ವೊಲ್ಕೊನೊದ ಸುತ್ತಲಿನ ರಾಷ್ಟ್ರೀಯ ಉದ್ಯಾನವನದ ಶಿಖರದಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿತ್ತು.

ಕಾಳ್ಗಿಚ್ಚಿನ ಭೀಕರ ಜ್ವಾಲೆಗಳು ಶುಕ್ರವಾರ ರಾತ್ರಿಯಿಂದ ಶನಿವಾರ ನಸುಕಿನವರೆಗೂ ಆಕಾಶವನ್ನು ಬೆಳಗಿದವು. ಜ್ವಾಲೆಗಳು ಪ್ರಮುಖ ಪ್ರವಾಸಿ ಪ್ರದೇಶಗಳನ್ನು ತಟ್ಟದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.  

ಕಾಳ್ಗಿಚ್ಚು ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದ ಮೇಲೆ ಪರಿಣಾಮ ಬೀರಿದೆ. 7 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಪ್ರಾದೇಶಿಕ ನಾಯಕ ಫರ್ನಾಂಡೊ ಕ್ಲಾವಿಜೊ ಶುಕ್ರವಾರ ತಡರಾತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT