ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಇಫ್ತಾರ್‌ ಕೂಟದ ಆಹ್ವಾನ ತಿರಸ್ಕರಿಸಿದ ಮುಸ್ಲಿಂ ಸಮುದಾಯ

Published 4 ಏಪ್ರಿಲ್ 2024, 14:08 IST
Last Updated 4 ಏಪ್ರಿಲ್ 2024, 14:08 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಇಫ್ತಾರ್‌ ಕೂಟಕ್ಕೆ ಶ್ವೇತ ಭವನ ನೀಡಿದ್ದ ಆಹ್ವಾನವನ್ನು ಅಮೆರಿಕದಲ್ಲಿರುವ ಮುಸ್ಲಿಂ ಸಮುದಾಯದ ಸದಸ್ಯರು ತಿರಸ್ಕರಿಸಿರುವುದು ವರದಿಯಾಗಿದೆ.

‘ಗಾಜಾದ ಮೇಲೆ ಇಸ್ರೇಲ್‌ ನಡೆಸುತ್ತಿರುವ ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಬೆಂಬಲ ನೀಡುತ್ತಿರುವುದನ್ನು ಖಂಡಿಸಿ ಮುಸ್ಲಿಂ ಸಮುದಾಯದ ಸದಸ್ಯರು ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಮಾಧ್ಯಮಗಳು ಬುಧವಾರ ವರದಿ ಮಾಡಿವೆ.

‘ಇಸ್ರೇಲ್‌ಗೆ ಬೆಂಬಲ ನೀಡುತ್ತಿರುವುದರಿಂದ ಜೋ ಬೈಡನ್‌ ಅವರ ವಿರುದ್ಧ ಅನೇಕ ಆಹ್ವಾನಿತರು ಬೇಸರಗೊಂಡಿದ್ದಾರೆ. ಪ್ಯಾಲೆಸ್ಟೀನ್‌ನ ಜನರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಬೈಡನ್‌ ಅವರು ಮಂಗಳವಾರ ಸಂಜೆ ಆಯೋಜಿಸಿದ್ದ ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿಲ್ಲ’ ಎಂದು ಹಲವು ಆಹ್ವಾನಿತರು ಹೇಳಿದ್ದಾರೆ’ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ತಿಳಿಸಿದೆ.

‘ನೀವು ನೀಡುವ ಭೋಜನ ಸೇವಿಸುತ್ತ ಆಹಾರದ ಕೊರತೆಯಿಂದ ಮತ್ತು ಹಸಿವಿನಿಂದ ಸಾಯುವವರ ಕುರಿತು ಹೇಗೆ ಮಾತನಾಡುವುದು?’ ಎಂದು ಅಮೆರಿಕದಲ್ಲಿ ನೆಲೆಸಿರುವ ಪ್ಯಾಲಿಸ್ಟೀನ್ ವೈದ್ಯ ಡಾ. ಥಾಯರ್‌ ಅಹ್ಮದ್‌ ಅವರು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ದಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಥಾಯರ್‌ ಅವರು ಜನವರಿಯಲ್ಲಿ ಪ್ಯಾಲೆಸ್ಟೀನ್‌ನಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT