ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಪ್‌ಟೌನ್‌: ಬಿರುಗಾಳಿ ಹೊಡೆತಕ್ಕೆ 1 ಸಾವಿರ ಮನೆಗಳು ಧ್ವಂಸ

Published 8 ಜುಲೈ 2024, 13:49 IST
Last Updated 8 ಜುಲೈ 2024, 13:49 IST
ಅಕ್ಷರ ಗಾತ್ರ

ಕೇಪ್‌ಟೌನ್‌: ಕಳೆದೊಂದು ವಾರದಿಂದ ಬಿರುಗಾಳಿಯ ಹೊಡೆತಕ್ಕೆ ನಗರದಲ್ಲಿ 1 ಸಾವಿರಕ್ಕೂ ಹೆಚ್ಚು ಮನೆಗಳು ಧ್ವಂಸಗೊಂಡಿದ್ದು, 4 ಸಾವಿರ ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಹಾಗೂ ಸೇವಾ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ಕೇಪ್‌ಟೌನ್‌ ಹಾಗೂ ಸುತ್ತಲಿನ ಪ್ರದೇಶಗಳು ಕನಿಷ್ಠ ಶುಕ್ರವಾರದವರೆಗೂ ಶೀತಗಾಳಿ, ಧಾರಾಕಾರ ಮಳೆ ಹಾಗೂ ಬಿರುಗಾಳಿ ಹೊಡೆತಕ್ಕೆ ಸಿಲುಕಲಿವೆ ಎಂದು ದಕ್ಷಿಣ ಆಫ್ರಿಕಾ ಹವಾಮಾನ ಇಲಾಖೆ ಅಧಿಕಾರಿಗಳು ಸೋಮವಾರ ಮುನ್ನೆಚ್ಚರಿಕೆ ನೀಡಿದ್ದಾರೆ.

ಕಳೆದ ಗುರುವಾರದಿಂದಲೇ ಕೇಪ್‌ಟೌನ್‌ ವಿಪತ್ತು ನಿರ್ವಹಣಾ ಸಮನ್ವಯ ತಂಡವು ಜನರಿಗೆ ಈ ಸಂಬಂಧ ಸೂಚನೆ ನೀಡಿತ್ತು.

ದಕ್ಷಿಣ ಆಫ್ರಿಕಾದ ಎರಡನೇ ಅತಿ ದೊಡ್ಡ ಪಟ್ಟಣವಾದ ಕೇಪ್‌ಟೌನ್‌ನಲ್ಲಿ ಬಡವರ ಮನೆಗಳೇ ಹೆಚ್ಚು ಹಾನಿಗೊಳಗಾಗಿವೆ. ಖಯೆಲಿಸ್ತಾ ಹಾಗೂ ಸುತ್ತಲಿನ ಪಟ್ಟಣಗಳಲ್ಲಿ ವಾಸಿಸುತ್ತಿರುವ ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದಾರೆ. ‘ಗಿಫ್ಟ್‌ ಆ್ಯಂಡ್‌ ಗಿವರ್ಸ್‌’ ಸ್ಥಳೀಯ ಸೇವಾ ಸಂಸ್ಥೆಯು ವಾರಾಂತ್ಯದಲ್ಲಿ 10 ಸಾವಿರ ಸಂತ್ರಸ್ತರಿಗೆ ಊಟ ಹಾಗೂ 3 ಸಾವಿರ ಹೊದಿಕೆಗಳನ್ನು ವಿತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT