‘ಸುಪ್ರೀಂ’ ಮಹತ್ವದ ದಾಖಲೆಗಳು ನಾಶ
ವಿದ್ಯಾರ್ಥಿಗಳ ನೇತೃತ್ವದ ಸರ್ಕಾರ ವಿರೋಧಿ ಪ್ರತಿಭಟನೆಯ ವೇಳೆ ಮಹತ್ವದ ನ್ಯಾಯಾಂಗ ದಾಖಲೆಗಳು ನಾಶವಾಗಿವೆ ಎಂದು ನೇಪಾಳದ ಸುಪ್ರೀಂ ಕೋರ್ಟ್ ತಿಳಿಸಿದೆ. ಎಂಥದ್ದೇ ಸಂದರ್ಭದಲ್ಲಿಯೂ ನ್ಯಾಯದ ಹಾದಿಯಲ್ಲಿ ಸ್ಥಿರ ಮತ್ತು ದೃಢನಿಶ್ಚಯದಿಂದ ನಿಲ್ಲುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಕಾಶ್ಮನ್ ಸಿಂಗ್ ರಾವುತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾಗರಿಕರ ಸಮಸ್ಯೆ ಆಲಿಸಲು ಆದಷ್ಟು ಶೀಘ್ರವಾಗಿ ನ್ಯಾಯಾಂಗ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.