ಕಠ್ಮಂಡು: ಪ್ರಯಾಣಿಕರಿದ್ದ ಬಸ್ ನದಿಗೆ ಉರುಳಿ, 18 ಮಂದಿ ಮೃತಪಟ್ಟಿರುವ ದುರಂತ ನೇಪಾಳದ ಧಾಡಿಂಗ್ ಜಿಲ್ಲೆಯಲ್ಲಿ ಸೋಮವಾರ ನಸುಕಿನಲ್ಲಿ ಸಂಭವಿಸಿದೆ.

ಧಾಡಿಂಗ್ ಜಿಲ್ಲೆಯ ಗಜೂರಿ ಎಂಬಲ್ಲಿ ನಸುಕಿನ 1.30ರ ಸುಮಾರಿಗೆ ಘಟನೆ ನಡೆದಿದೆ.

ಪೋಖರದಿಂದ ಕಠ್ಮಂಡು ಕಡೆಗೆ ಬರುತ್ತಿದ್ದ ಬಸ್, ಕಠ್ಮಂಡುವಿನಿಂದ ಸುಮಾರು 90 ಕಿ.ಮೀ ದೂರದಲ್ಲಿ ತ್ರಿಶೂಲಿ ನದಿಗೆ ಉರುಳಿದೆ. ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಸಶಸ್ತ್ರ ಪೊಲೀಸ್ ಪಡೆಯ ವಕ್ತಾರ ಬಿಷ್ಣು ಪ್ರಸಾದ್ ಭಟ್ಟ ತಿಳಿಸಿದ್ದಾರೆ.

ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ, ನೇಪಾಳ ಪೊಲೀಸರು ರಕ್ಷಣಾ ಕಾರ್ಯಾಚರಣೆಗಿಳಿದಿದ್ದಾರೆ.

ದುರಂತ ಸ್ಥಳದಿಂದ 17 ಶವಗಳನ್ನು ಹೊರತೆಗೆಯಲಾಗಿದೆ. ಗಾಯಗೊಂಡಿದ್ದ 28 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ ಒಬ್ಬರು ನ್ಯೂಜಿಲೆಂಡ್ ಪ್ರಜೆ. ಜಪಾನ್ ಹಾಗೂ ನೆದರ್ಲೆಂಡ್ಸ್ನ ತಲಾ ಒಬ್ಬರು ಗಾಯಗೊಂಡಿದ್ದು, ಇಬ್ಬರೂ ಮಹಿಳೆಯರೇ ಎಂಬುದು ತಿಳಿದುಬಂದಿದೆ.

ಅಪಘಾತಕ್ಕೇನು ಕಾರಣ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.