ಕಠ್ಮಂಡು: ಚೀನಾ,ಅಮೆರಿಕ ಸೇರಿ 11 ರಾಷ್ಟ್ರಗಳಲ್ಲಿನ ತನ್ನ ರಾಯಭಾರಿಗಳನ್ನು ವಾಪಸು ಕರೆಸಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ನೇಪಾಳ ಸುಪ್ರೀಂ ಕೋರ್ಟ್ ಭಾನುವಾರ ತಡೆ ನೀಡಿದೆ.

ನ್ಯಾಯಮೂರ್ತಿಗಳಾದ ಶಾರಂಗ ಸುವೇದಿ ಹಾಗೂ ಶ್ರೀ ಕಾಂತ ಪೌಡೆಲ್ ಅವರು ಇದ್ದ ಪೀಠವು ಈ ಕುರಿತ ಅರ್ಜಿ ವಿಚಾರಣೆ ನಡೆಸಿ, ಮಧ್ಯಂತರ ತಡೆಯಾಜ್ಞೆ ನೀಡಿದೆ.

ಚೀನಾ, ಜರ್ಮನಿ, ಇಸ್ರೇಲ್, ಮಲೇಷ್ಯಾ, ಕತಾರ್, ರಷ್ಯಾ, ಸೌದಿ ಅರೇಬಿಯಾ, ಸ್ಪೇನ್, ಬ್ರಿಟನ್, ಅಮೆರಿಕ ಹಾಗೂ ಜಪಾನ್ನಲ್ಲಿರುವ ರಾಯಭಾರಿಗಳನ್ನು ನವೆಂಬರ್ 6ರ ಒಳಗಾಗಿ ವಾಪಸ್ ಕರೆಸಿಕೊಳ್ಳಬೇಕು ಎಂದು ಅಕ್ಟೋಬರ್ 6ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ, ಈ ಎಲ್ಲ ದೇಶಗಳಲ್ಲಿರುವ ರಾಜತಾಂತ್ರಿಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಈ ಹಿಂದಿನ, ನೇಪಾಳ ಕಮ್ಯುನಿಸ್ಟ್ ಪಾರ್ಟಿ–ಯುನಿಫೈಡ್ ಮಾರ್ಕ್ಸಿಸ್ಟ್ ಹಾಗೂ ನೇಪಾಳಿ ಕಾಂಗ್ರೆಸ್ ಮೈತ್ರಿಕೂಟ ನೇತೃತ್ವದ ಸರ್ಕಾರ ಈ ರಾಯಭಾರಿಗಳನ್ನು ನೇಮಕ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.