ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಕಬಳಿಕೆ ಹಗರಣ: ನೇಪಾಳದ ಇಬ್ಬರು ಮಾಜಿ ಪ್ರಧಾನಿಗಳ ವಿಚಾರಣೆ

Published 21 ಆಗಸ್ಟ್ 2023, 13:32 IST
Last Updated 21 ಆಗಸ್ಟ್ 2023, 13:32 IST
ಅಕ್ಷರ ಗಾತ್ರ

ಕಠ್ಮಂಡು: ಲಲಿತಾ ನಿವಾಸ್‌ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳದ ಮಾಜಿ ಪ್ರಧಾನಿಗಳಾದ ಮಾಧವ್‌ ಕುಮಾರ್‌ ನೇಪಾಳ್‌ ಮತ್ತು ಬಾಬುರಾಮ್ ಭಟ್ಟರೈ ಅವರನ್ನು ಇದೇ ಮೊದಲ ಬಾರಿಗೆ ಕೇಂದ್ರೀಯ ತನಿಖಾ ದಳ (ಸಿಐಬಿ) ವಿಚಾರಣೆಗೆ ಒಳಪಡಿಸಿದೆ.

ಕಠ್ಮಂಡುವಿನ ಬಲುವತಾರ್‌ನಲ್ಲಿರುವ ಪ್ರಧಾನಿ ಅಧಿಕೃತ ನಿವಾಸದ ಪಕ್ಕದ ಅಂದಾಜು 37 ಎಕರೆ ಜಮೀನನ್ನು ಕಬಳಿಸಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಮಾಧವ್‌ ಕುಮಾರ್‌ ಮತ್ತು ಬಾಬುರಾಮ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಿಐಬಿ ವಕ್ತಾರ ನವರಾಜ್‌ ಅಧಿಕಾರಿ ಸೋಮವಾರ ತಿಳಿಸಿದ್ದಾರೆ.

ಮಾಧವ್‌ ಕುಮಾರ್‌ ಅವರು ಪ್ರಧಾನಿಯಾಗಿದ್ದಾಗ ಈ ಹಗರಣ ನಡೆದಿತ್ತು. ಆಗ ಬಾಬುರಾಮ್‌ ಅವರು ಸಚಿವರಾಗಿದ್ದರು.

ಮಾಧವ ಕುಮಾರ್‌ ಅವರು ಸದ್ಯ ಸಿಪಿಎನ್ (ಯೂನಿಫೈಡ್‌ ಸೋಷಿಯಲಿಸ್ಟ್‌) ಪಕ್ಷದ ಅಧ್ಯಕ್ಷರಾಗಿದ್ದಾರೆ. ಬಾಬುರಾಮ್‌ ಅವರು ನೇಪಾಳ ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT