ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ ಸಂಸತ್ತಿನಲ್ಲಿ ವಿಶ್ವಾಸ ಮತ ಗೆದ್ದ ಪ್ರಧಾನಿ ಪ್ರಚಂಡ

Last Updated 10 ಜನವರಿ 2023, 12:49 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದ ನೂತನ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಮಂಗಳವಾರ ನೇಪಾಳ ಸಂಸತ್ತಿನ ಕೆಳಮನೆಯಾದ ಪ್ರಜಾಪ್ರತಿನಿಧಿಗಳ ಸಭೆಯಲ್ಲಿ ವಿಶ್ವಾಸ ಮತ ಗೆದ್ದಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ನೇತೃತ್ವದ ಚುನಾವಣಾ ಪೂರ್ವ ಮೈತ್ರಿಕೂಟದಿಂದ ಅಚ್ಚರಿಯ ರೀತಿಯಲ್ಲಿ ಹೊರಬಂದ ಪ್ರಚಂಡ, ವಿರೋಧ ಪಕ್ಷದ ನಾಯಕ ಶರ್ಮಾ ಓಲಿ ಜತೆ ಕೈಜೋಡಿಸಿದ್ದರು. ಪರಿಣಾಮವಾಗಿ 68 ವರ್ಷದ ಸಿಪಿಎನ್-ಮಾವೋವಾದಿ ನಾಯಕ ಕಳೆದ ವರ್ಷ ಡಿಸೆಂಬರ್ 26 ರಂದು ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಮತದಾನದ ವೇಳೆ ಪ್ರಜಾಪ್ರತಿನಿಧಿಗಳ ಸಭೆಯಲ್ಲಿ ಹಾಜರಿದ್ದ 270 ಸದಸ್ಯರ ಪೈಕಿ 268 ಜನ ಪ್ರಧಾನಿ ಪರವಾಗಿ ಮತ ಚಲಾಯಿಸಿದ್ದಾರೆ.

ಪ್ರಚಂಡ ಅವರು ಮಂಡಿಸಿದ ವಿಶ್ವಾಸಮತದ ಪ್ರಸ್ತಾವನೆಯನ್ನು ಸಭೆ ಅಂಗೀಕರಿಸಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸದನದ ಹಿರಿಯ ಸದಸ್ಯರಾದ ಪಶುಪತಿ ಶಂಶೇರ್ ರಾಣಾ ಹೇಳಿದ್ದಾರೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಣಾ ಮತದಾನ ಮಾಡಲಿಲ್ಲ. ಇತರ ನಾಲ್ವರು ಸಂಸದರು ಗೈರಾಗಿದ್ದರು.

275 ಸದಸ್ಯ ಬಲದ ಸಂಸತ್ತಿನಲ್ಲಿ ಪ್ರಧಾನಿಯಾಗಿ ಮುಂದುವರಿಯಲು ಪ್ರಚಂಡ ಕೇವಲ 138 ಮತಗಳನ್ನು ಗಳಿಸಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT