ಮೈದುಗುರಿ (ನೈಜೀರಿಯಾ): ಪೆಟ್ರೋಲ್ ಟ್ಯಾಂಕರ್ ಸ್ಫೋಟದಿಂದಾಗಿ ಮೃತಪಟ್ಟವರ ಸಂಖ್ಯೆ 86ಕ್ಕೆ ಏರಿಕೆಯಾಗಿದೆ ಎಂದು ಪ್ರಾದೇಶಿಕ ತುರ್ತು ರಕ್ಷಣಾ ದಳದ ಮಹಾ ನಿರ್ದೇಶಕ ಸೋಮವಾರ ಮಾಹಿತಿ ನೀಡಿದ್ದಾರೆ.

60,000 ಲೀ. ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ನೈಗರ್ ರಾಜ್ಯದ ಡಿಕ್ಕೊ ಎಂಬಲ್ಲಿ ಶನಿವಾರ ಪಲ್ಟಿಯಾಗಿತ್ತು. ಸುರಿದಿದ್ದ ಪೆಟ್ರೋಲ್ ತುಂಬಿಕೊಳ್ಳಲು ಸ್ಥಳೀಯರು ಮುಗಿಬಿದ್ದಿದ್ದರು. ಇದೇ ವೇಳೆ ಸ್ಫೋಟ ಸಂಭವಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೈಜೀರಿಯಾ ಅಧ್ಯಕ್ಷ ಬೊಲಾ ತಿನುಡು ಅವರು, ಆರ್ಥಿಕ ಸುಧಾರಣೆಯ ಭಾಗವಾಗಿ ಇಂಧನದ ಮೇಲಿನ ಸಬ್ಸಿಡಿಯನ್ನು 2023ರಲ್ಲಿ ರದ್ದುಗೊಳಿಸಿದಾಗಿನಿಂದ ದೇಶದಲ್ಲಿ ಪೆಟ್ರೋಲ್ ದರ ಏರುತ್ತಾ ಸಾಗಿದೆ.

ದುರಂತದಲ್ಲಿ ಗಾಯಗೊಂಡಿರುವ ಇನ್ನೂ 55 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

'80 ಶವಗಳ ಅಂತ್ಯ ಸಂಸ್ಕಾರವನ್ನು ಸಾಮೂಹಿಕವಾಗಿ ನೆರವೇರಿಸಲಾಗಿದೆ. ಐವರ ಶವಗಳನ್ನು ಸಂಬಂಧಿಗಳು ಕೊಂಡೊಯ್ದಿದ್ದಾರೆ. ಡಿಕ್ಕೊದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತೊಬ್ಬರು ಮೃತಪಟ್ಟಿದ್ದಾರೆ' ಎಂದು ನೈಗರ್ ರಾಜ್ಯ ತುರ್ತು ರಕ್ಷಣಾ ದಳದ ಮಹಾ ನಿರ್ದೇಶಕ ಅಬ್ದುಲ್ಲಾಹಿ ಬಾಬಾ–ಅರಾ ತಿಳಿಸಿದ್ದಾರೆ.

2024ರ ಅಕ್ಟೋಬರ್ನಲ್ಲಿ ಜಿಗಾವಾ ರಾಜ್ಯದಲ್ಲಿ ಇದೇ ರೀತಿಯ ಸ್ಫೋಟ ಸಂಭವಿಸಿ, 147 ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.