ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: 9 ಜನರಲ್‌ಗಳನ್ನು ವಜಾ ಮಾಡಿದ ಸಂಸತ್

Published 30 ಡಿಸೆಂಬರ್ 2023, 13:13 IST
Last Updated 30 ಡಿಸೆಂಬರ್ 2023, 13:13 IST
ಅಕ್ಷರ ಗಾತ್ರ

ಬೀಜಿಂಗ್: ಮಹತ್ವದ ಬೆಳವಣಿಗೆಯೊಂದರಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಉನ್ನತ ಮಟ್ಟದ 9 ಜನರಲ್‌ಗಳನ್ನು ಸಂಸತ್ತಿನಿಂದ ವಜಾಗೊಳಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ಶನಿವಾರ ವರದಿ ಮಾಡಿದೆ. 

ಚೀನಾದ ಸಂಸತ್ತು ಆಗಿರುವ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನಿಂದ (ಎನ್‌ಪಿಸಿ) ವಜಾಗೊಂಡವರಲ್ಲಿ ಕ್ಷಿಪಣಿ ವಿಭಾಗವನ್ನು ನಿರ್ವಹಿಸುವ ಪೀಪಲ್ಸ್ ಲಿಬರೇಷನ್‌ ಆರ್ಮಿಯ ರಾಕೆಟ್ ಪಡೆಯ ಐವರು ಮಾಜಿ ಕಮಾಂಡರ್‌ಗಳು ಅಥವಾ ಹಾಲಿ  ಕಮಾಂಡರ್‌ಗಳು ಇದ್ದಾರೆ. ಆದರೆ, ಅವರ ಅನರ್ಹತೆಗೆ ಯಾವುದೇ ಕಾರಣಗಳನ್ನು ನೀಡಿಲ್ಲ. 

ನೌಕಾಪಡೆಯ ಕಮಾಂಡರ್ ಜನರಲ್ ಡಾಂಗ್ ಜುನ್ ಅವರನ್ನು ರಕ್ಷಣಾ ಸಚಿವರನ್ನಾಗಿ ಎನ್‌ಪಿಸಿ ನೇಮಕ ಮಾಡಿದ ಬೆನ್ನಲ್ಲೇ, 9 ಜನರಲ್‌ಗಳ ವಜಾ ಕ್ರಮ ಹೊರಬಿದ್ದಿದೆ. ಎರಡು ತಿಂಗಳ ಹಿಂದೆಯೂ ಯಾವುದೇ ವಿವರಣೆ ನೀಡದೆ, ಜನರಲ್ ಲಿ ಶಾಂಗ್‌ಫು ಅವರನ್ನು ವಜಾಗೊಳಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT