ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾವೋಸ್ ಅಣೆಕಟ್ಟೆ ದುರಂತ: 19 ಸಾವು

ಮುಂದುವರಿದ ರಕ್ಷಣಾ ಕಾರ್ಯಾಚರಣೆ
Last Updated 25 ಜುಲೈ 2018, 11:28 IST
ಅಕ್ಷರ ಗಾತ್ರ

ಬ್ಯಾಂಕಾಕ್: ಆಗ್ನೇಯ ಲಾವೋಸ್‌ನಲ್ಲಿ ಅಣೆಕಟ್ಟೆ ದುರಂತದಲ್ಲಿ 19 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಸುಮಾರು 3,000 ಜನರನ್ನು ಪ್ರವಾಹಪೀಡಿತ ಪ್ರದೇಶಗಳಿಂದ ರಕ್ಷಿಸಬೇಕಿದೆ. 2,500ಕ್ಕೂ ಹೆಚ್ಚು ಜನರನ್ನು ಈಗಾಗಲೇ ರಕ್ಷಿಸಲಾಗಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯಾಡಳಿತ ತಿಳಿಸಿದೆ.ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್‌ ಉತ್ಪಾದನಾ ಅಣೆಕಟ್ಟೆ ಭಾರಿ ಮಳೆಯಿಂದಾಗಿ ಸೋಮವಾರ ಸಂಜೆ ಒಡೆದ ಪರಿಣಾಮ ಹತ್ತಾರು ಗ್ರಾಮಗಳು ಭಾಗಶಃ ನೀರಿನಲ್ಲಿ ಮುಳುಗಡೆಯಾಗಿದ್ದವು.

ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿರುವ ಸಂತ್ರಸ್ತರು –ರಾಯಿಟರ್ಸ್ ಚಿತ್ರ
ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿರುವ ಸಂತ್ರಸ್ತರು –ರಾಯಿಟರ್ಸ್ ಚಿತ್ರ

ದುರಂತಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯ ವರದಿಯ ಪ್ರಕಾರ, 357 ಗ್ರಾಮಗಳ 11,777 ಜನರು ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಈ ಪೈಕಿ, 34 ಮಂದಿ ಕಣ್ಮರೆಯಾಗಿದ್ದರೆ 1,494 ಜನರನ್ನು ರಕ್ಷಿಸಲಾಗಿದೆ.

ಪ್ರವಾಹದಿಂದ ರಕ್ಷಣೆಗೆ ತೆಪ್ಪದ ಆಶ್ರಯ ಪಡೆದ ಜನ
ಪ್ರವಾಹದಿಂದ ರಕ್ಷಣೆಗೆ ತೆಪ್ಪದ ಆಶ್ರಯ ಪಡೆದ ಜನ

ಪ್ರವಾಹದಿಂದಾಗಿ ಕನಿಷ್ಠ 7 ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿವೆ. ನೂರಾರು ಮನೆಗಳು ನೀರಿನಿಂದಾವೃತಗೊಂಡಿದ್ದು, ಗ್ರಾಮಸ್ಥರು ಚಿಕ್ಕ ಮಕ್ಕಳೊಂದಿಗೆ ಮನೆಯ ಮಾಡಿನ ಮೇಲೆ ಸಹಾಯ ಯಾಚಿಸುವ, ಮರದ ತೆಪ್ಪಗಳಲ್ಲಿ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಪ್ರಯತ್ನಿಸುತ್ತಿರುವ ದೃಶ್ಯಗಳನ್ನು ಅಲ್ಲಿನ ಮಾಧ್ಯಮಗಳು ಪ್ರಕಟಿಸಿವೆ.

ಪರಿಹಾರ ಶಿಬಿರಗಳಲ್ಲಿ ನಿರಾಶ್ರಿತರು –ರಾಯಿಟರ್ಸ್ ಚಿತ್ರ
ಪರಿಹಾರ ಶಿಬಿರಗಳಲ್ಲಿ ನಿರಾಶ್ರಿತರು –ರಾಯಿಟರ್ಸ್ ಚಿತ್ರ

ಕಾಂಬೋಡಿಯಾ ಗಡಿಯಲ್ಲಿರುವ ಅಣೆಕಟ್ಟೆ ಇದಾಗಿದ್ದು, ಸೋಮವಾರ ಸಂಜೆ ದುರ್ಘಟನೆ ಸಂಭವಿಸಿದೆ. ಅಣೆಕಟ್ಟೆ ಒಡೆದ ಪರಿಣಾಮ ಐದು ದಶಲಕ್ಷ ಕ್ಯೂಸೆಕ್‌ ಮೀಟರ್‌ ನೀರು ಹೊರ ಹರಿದಿದೆ ಎಂದು ಲಾವೋಸ್‌ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿತ್ತು.

ಪ್ರವಾಹದಿಂದ ಮುಳುಗಡೆಯಾಗಿರುವ ಕೃಷಿಭೂಮಿ –ರಾಯಿಟರ್ಸ್ ಚಿತ್ರ
ಪ್ರವಾಹದಿಂದ ಮುಳುಗಡೆಯಾಗಿರುವ ಕೃಷಿಭೂಮಿ –ರಾಯಿಟರ್ಸ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT