ಪ್ರಜಾಪ್ರಭುತ್ವ ಪರವಾದ ಹೋರಾಟ ಯಾವಾಗಲೂ ಗೆಲ್ಲುತ್ತದೆ
ಜಗತ್ತಿಗೆ ಒಂದು ಶಕ್ತಿಯುತ ಸಂದೇಶ ರವಾನೆಯಾಗಿದೆ. ಸ್ವಾತಂತ್ರ್ಯದ ಕಿಚ್ಚನ್ನು ಬಂಧಿಸಲಾಗುವುದಿಲ್ಲ. ಪ್ರಜಾಪ್ರಭುತ್ವ ಪರವಾದ ಹೋರಾಟ ಯಾವಾಗಲೂ ಗೆಲ್ಲುತ್ತದೆ. ಮಾರಿಯಾ ಹೋರಾಟ ಮುಂದುವರಿಯಲಿ –ಉರ್ಸುಲಾ ವಾನ್ ಡರ್ ಲೆಯೆನ್ ಐರೋಪ್ಯ ಒಕ್ಕೂಟದ (ಇಯು) ಅಧ್ಯಕ್ಷೆ ಪ್ರಜಾಪ್ರಭುತ್ವ ಮತ್ತು ಮಾನವಹಕ್ಕುಗಳ ಉಲ್ಲಂಘನೆ ವಿರುದ್ಧ ಧೈರ್ಯದಿಂದ ಹೋರಾಟ ಮತ್ತು ದೀರ್ಘಕಾಲ ಬದ್ಧತೆಗೆ ಗೌರವ ದೊರೆತಿದೆ –ಜರ್ಮನಿ ಸರ್ಕಾರ ಮಾರಿಯಾ ಅವರಿಗೆ ದೊರೆತ ಗೌರವವು ಮುಕ್ತ ಹಾಗೂ ನ್ಯಾಯಯುತ ಚುನಾವಣೆ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಪರವಾದ ವೆನೆಜುವೆಲಾ ಜನರ ಆಕಾಂಕ್ಷೆಗಳ ಪ್ರತಿಫಲವಾಗಿದೆ –ವಿಶ್ವಸಂಸ್ಥೆ