ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೂಸ್ ಕ್ಷಿಪಣಿ ಪರೀಕ್ಷೆ ನಡೆಸಿದ ಉ.ಕೊರಿಯಾ: ಖುದ್ದು ಮೇಲ್ವಿಚಾರಣೆ ನಡೆಸಿದ ಕಿಮ್

Published 29 ಜನವರಿ 2024, 3:39 IST
Last Updated 29 ಜನವರಿ 2024, 3:39 IST
ಅಕ್ಷರ ಗಾತ್ರ

ಸೀಲ್: ಜಲಾಂತರ್ಗಾಮಿ ನೌಕೆಯಿಂದ ಉಡಾವಣೆ ಮಾಡಲು ವಿನ್ಯಾಸಗೊಳಿಸಲಾದ ಹೊಸ ಕ್ರೂಸ್ ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆಗಳನ್ನು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮೇಲ್ವಿಚಾರಣೆ ಮಾಡಿದರು.

ಜೊತೆಗೆ, ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಯನ್ನು ನಿರ್ಮಿಸುವ ಪ್ರಯತ್ನಗಳನ್ನು ಪರಿಶೀಲಿಸಿದರು. ಹೆಚ್ಚುತ್ತಿರುವ ಬಾಹ್ಯ ಬೆದರಿಕೆಗಳನ್ನು ಎದುರಿಸುವ ನಿಟ್ಟಿನಲ್ಲಿ ಪರಮಾಣು-ಸಜ್ಜಿತ ನೌಕಾಪಡೆಯನ್ನು ನಿರ್ಮಿಸುವ ಗುರಿಯನ್ನು ಪುನರುಚ್ಚರಿಸಿದರು ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಉತ್ತರ ಕೊರಿಯಾದ ಜಲಾಂತರ್ಗಾಮಿ ನೌಕೆಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸಿನ್‌ಪೋದ ಪೂರ್ವ ಬಂದರಿನ ಬಳಿ ಸಮುದ್ರದಲ್ಲಿ ಉತ್ತರ ಕೊರಿಯಾ ಕ್ರೂಸ್ ಕ್ಷಿಪಣಿಗಳನ್ನು ಹಾರಿಸುತ್ತಿರುವುದನ್ನು ದಕ್ಷಿಣ ಕೊರಿಯಾ ಮಿಲಿಟರಿಯು ಪತ್ತೆ ಹಚ್ಚಿದ ಒಂದು ದಿನದ ನಂತರ ಈ ವರದಿ ಬಂದಿದೆ.

ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್‌ನೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಉತ್ತರ ಕೊರಿಯಾದ ಶಸ್ತ್ರಾಸ್ತ್ರ ಪ್ರದರ್ಶನಗಳ ಸರಣಿ ಮುಂದುವರಿದಿದೆ.

ಉತ್ತರ ಕೊರಿಯಾದ ಅಧಿಕೃತ ಪತ್ರಿಕೆ ರೊಡಾಂಗ್ ಸಿನ್ಮುನ್, ಕನಿಷ್ಠ ಎರಡು ಕ್ಷಿಪಣಿಗಳನ್ನು ಪ್ರತ್ಯೇಕವಾಗಿ ಹಾರಿಸಿರುವ ಚಿತ್ರಗಳನ್ನು ಪ್ರಕಟಿಸಿದೆ. ನೀರಿನ ಮೇಲ್ಮೈಯಿಂದ ಸುಮಾರು 45 ಡಿಗ್ರಿ ಕೋನದಲ್ಲಿ ಗಾಳಿಯಲ್ಲಿ ಮೇಲೇರುತ್ತಿದ್ದಂತೆ ಎರಡೂ ಕ್ಷಿಪಣಿಗಳು ಬೂದು ಬಣ್ಣದ ಮೋಡಗಳನ್ನು ಸೃಷ್ಟಿಸಿದವು ಎಂದು ವರದಿ ತಿಳಿಸಿದೆ.

ಇತ್ತೀಚಿನ ವರ್ಷಗಳಲ್ಲಿ, ಕಡಲ ಬೆದರಿಕೆಗಳನ್ನು ಎದುರಿಸಲು ಉತ್ತರ ಕೊರಿಯಾವು ಜಲಾಂತರ್ಗಾಮಿ ನೌಕೆಗಳಿಂದ ಉಡಾಯಿಸಲು ವಿನ್ಯಾಸಗೊಳಿಸಲಾದ ವಿವಿಧ ಕ್ಷಿಪಣಿಗಳನ್ನು ಪರೀಕ್ಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT