ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಆಗಸ್ಟ್‌ನಲ್ಲೇ ಕೋವಿಡ್ ಹರಡಿರಬಹುದು ಎಂದ ಹಾರ್ವರ್ಡ್ ವಿಜ್ಞಾನಿಗಳು

Last Updated 9 ಜೂನ್ 2020, 13:54 IST
ಅಕ್ಷರ ಗಾತ್ರ

ಲಂಡನ್: ‘2019ರ ಆಗಸ್ಟ್‌ನಲ್ಲಿಯೇ ಚೀನಾದಲ್ಲಿ ಕೊರೊನಾವೈರಸ್ ಹರಡುವಿಕೆ ಆರಂಭವಾಗಿರಬಹುದು’ ಎಂದು ‘ಹಾರ್ವರ್ಡ್‌ ಮೆಡಿಕಲ್ ಸ್ಕೂಲ್‌’ನ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಅಧ್ಯಯನ ವರದಿಯನ್ನು ‘ಹಾಸ್ಯಾಸ್ಪದ’ ಎಂದು ಚೀನಾ ಹೇಳಿದೆ.

ಕೊರೋನಾವೈರಸ್ ಮೊದಲು ಪತ್ತೆಯಾದ ವುಹಾನ್‌ ನಗರದ ಆಸ್ಪತ್ರೆಗಳಿಗೆ ಬರುವ ವಾಹನಗಳ ಸಂಖ್ಯೆಯಲ್ಲಿ ಏರಿಕೆ ಆಗಿದೆ.ವುಹಾನ್‌ ನಗರದ ಜನರು 2019ರ ಆಗಸ್ಟ್‌ನಲ್ಲಿಕೆಮ್ಮು ಮತ್ತು ಅತಿಸಾರಗಳಿಗೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಹೆಚ್ಚು ಬಾರಿ ಮಾಹಿತಿ ಹುಡುಕಿದ್ದಾರೆ. ಈ ಎರಡೂ ಮಾಹಿತಿಗಳನ್ನು ಆಧಾರವಾಗಿ ಇಟ್ಟುಕೊಂಡು, ಕೊರೋನಾ ಸೋಂಕು ಆಗಸ್ಟ್‌ನಲ್ಲಿಯೇ ಹರಡಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ವುಹಾನ್‌ನ ಆಸ್ಪತ್ರೆಗಳ ವಾಹನ ನಿಲುಗಡೆ ಪ್ರದೇಶಗಳ ಉಪಗ್ರಹ ಚಿತ್ರಗಳನ್ನು ಪರಿಶೀಲಿಸಲಾಯಿತು. ಆಗಸ್ಟ್‌ನಿಂದ ಹೆಚ್ಚಿನ ಸಂಖ್ಯೆಯ ವಾಹನಗಳು ಆಸ್ಪತ್ರೆಗೆ ಬರಲು ಆರಂಭಿಸಿವೆ. ಆರಂಭದಲ್ಲಿ ಸೋಂಕು ಪತ್ತೆಯಾದ ಹನಾನ್ ಪ್ರಾಣಿ ಮತ್ತು ಸಾಗರೋತ್ಪನ್ನ ಮಾರುಕಟ್ಟೆಗೆ ಸಮೀಪದ ಆಸ್ಪತ್ರೆಗಳಲ್ಲಿ ಇಂತಹ ಬೆಳವಣಿಗೆ ದಾಖಲಾಗಿದೆ. ಸೋಂಕು ಆಗಲೇ ಹರಡಿರಬಹುದು ಎಂಬುದನ್ನು ಇದು ಸೂಚಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಮಾರುಕಟ್ಟೆಗೆ ಸಮೀಪವಿರುವ ಪ್ರದೇಶಗಳಲ್ಲೇ ಜನರು ವಿವಿಧ ಸರ್ಚ್‌ ಎಂಜಿನ್‌ಗಳಲ್ಲಿ, ಕೆಮ್ಮು ಮತ್ತು ಅತಿಸಾರದ ಬಗ್ಗೆ ಮಾಹಿತಿ ಹುಡುಕಿದ್ದಾರೆ. ಈ ಹಿಂದೆ ಯಾವ ವರ್ಷದಲ್ಲೂ ಆಗಸ್ಟ್‌ನಲ್ಲಿ ಅಲ್ಲಿನ ಜನರು ಕೆಮ್ಮು ಮತ್ತು ಅತಿಸಾರದ ಬಗ್ಗೆ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿಲ್ಲ. ಈ ಹುಡುಕಾಟದಲ್ಲಿ ಆಗಿರುವ ದಿಢೀರ್ ಏರಿಕೆಯೂ ಸೋಂಕು ಆಗಸ್ಟ್‌ನಲ್ಲಿಯೇ ಹರಡಿರಬಹುದು ಎಂಬುದನ್ನು ಸೂಚಿಸುತ್ತದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ವಿಜ್ಞಾನಿಗಳ ಈ ಹೇಳಿಕೆಗೆ ಚೀನಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ‘ವಾಹನಗಳ ಸಂಖ್ಯೆಯಲ್ಲಿ ಆದ ಹೆಚ್ಚಳದ ಆಧಾರದ ಮೇಲೆ ಇಂತಹ ಅಭಿಪ್ರಾಯಕ್ಕೆ ಬರುವುದು ಅತ್ಯಂತ ಹಾಸ್ಯಾಸ್ಪದ’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರೆ ಹಾ ಚನ್‌ಯಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT