ಅಮೆರಿಕ (ಪಿಟಿಐ): ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ2021ನೇ ಸಾಲಿನಲ್ಲಿ ಶೇ 12ಕ್ಕೂ ಅಧಿಕ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಚೀನಾದ ವಿದ್ಯಾರ್ಥಿಗಳ ಸಂಖ್ಯೆ ಶೇ 8ಕ್ಕಿಂತ ಕಡಿಮೆಯಾಗಿದೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳು (ಯುಎಸ್‌ಸಿಐಎಸ್) ಬಿಡುಗಡೆಗೊಳಿಸಿದ ವರದಿಯು ತಿಳಿಸಿದೆ.

ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ದಾಖಲಾತಿಯು ಕೋವಿಡ್ ಕಾರಣದಿಂದಾಗಿ ಇಳಿಮುಖವಾಗಿದೆ. ಅಂಕಿ ಅಂಶದ ಪ್ರಕಾರ, 2021ರಲ್ಲಿ ಅಮೆರಿಕದಲ್ಲಿ ಒಟ್ಟಾರೆ 12.36 ಲಕ್ಷ ವಿದೇಶಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದು, 2020ನೇ ಸಾಲಿಗೆ ಹೋಲಿಕೆ ಮಾಡಿದರೆ ಶೇ 1.2ರಷ್ಟು ಕಡಿಮೆ.

ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲು 8,038 ಶೈಕ್ಷಣಿಕ ಸಂಸ್ಥೆಗಳು ಅರ್ಹತೆ ಹೊಂದಿದ್ದವು. ಕಳೆದ ಸಾಲಿನಲ್ಲಿ 8,369 ಸಂಸ್ಥೆಗಳು ಅರ್ಹತೆ ಪಡೆದುಕೊಂಡಿದ್ದವು. ಈ ವರ್ಷ 280 ಸಂಸ್ಥೆಗಳು ಕಡಿಮೆಯಾಗಿದ್ದವು.

ಪ್ರಸ್ತಕ ಸಾಲಿನಲ್ಲಿ ಚೀನಾ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕುಸಿದರೂ 3.48 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಚೀನಾ ಮೊದಲ ಸ್ಥಾನದಲ್ಲಿದೆ. ಭಾರತದ 2.32 ಲಕ್ಷ ವಿದ್ಯಾರ್ಥಿಗಳು ತೆರಳಿದ್ದು, 2ನೇ ಸ್ಥಾನದಲ್ಲಿದೆ. ಇವರಲ್ಲಿ ವಿದ್ಯಾರ್ಥಿನಿಯರ ಪ್ರಮಾಣ ಶೇ 37.

ನಂತರದ ಸ್ಥಾನಗಳಲ್ಲಿ ದಕ್ಷಿಣ ಕೊರಿಯಾ (58,787), ಕೆನಡಾ (37,453), ಬ್ರೇಜಿಲ್ (33,552), ವಿಯೆಟ್ನಾಂ (29,597), ಸೌದಿ ಅರಬಿಯಾ (28,600), ತೈವಾನ್ (25,406), ಜಪಾನ್ (20,144) ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.