ವಾಷಿಂಗ್ಟನ್: ಅಧಿಕಾರ ಹಸ್ತಾಂತರದ ವೇಳೆ ಹಾಲಿ ಸರ್ಕಾರದ ಪ್ರಮುಖ ಇಲಾಖೆಗಳು ಕೈಗೊಂಡಿರುವ ಚಟುವಟಿಕೆಗಳನ್ನು ಪರಿಶೀಲಿಸುವುದಕ್ಕಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ರಚಿಸಿರುವ ‘ಇಲಾಖೆಗಳ ಪರಿಶೀಲನಾ ತಂಡಗಳ(ಏಜೆನ್ಸಿ ರಿವೀವ್ ಟೀಮ್ಸ್–ಎಆರ್‌ಟಿ) ಸದಸ್ಯರನ್ನಾಗಿ 20 ಮಂದಿ ಭಾರತೀಯ–ಅಮೆರಿಕನ್ ಪ್ರತಿನಿಧಿಗಳನ್ನು ನೇಮಿಸಿದ್ದಾರೆ.

ಇವರಲ್ಲಿ ಮೂವರು ಈ ತಂಡಗಳ ಮುಖ್ಯಸ್ಥರನ್ನಾಗಿದ್ದಾರೆ. ಸರ್ಕಾರದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿ ನಡೆಸುವುದಕ್ಕಾಗಿ ಹಾಲಿ ಸರ್ಕಾರದ ಇಲಾಖೆಗಳ ಚಟುವಟಿಕೆಗಳನ್ನು ಪರಿಶೀಲಿಸಲು ಬೈಡನ್ ಇಂಥ ತಂಡಗಳನ್ನು ರಚಿಸಿದ್ದಾರೆ.

‘ಅಧಿಕಾರ ಹಸ್ತಾಂತರದ ವೇಳೆ ಇಲ್ಲಿವರೆಗೂ ಕೆಲಸ ಮಾಡಿರುವ ವಿವಿಧ ಅಧ್ಯಕ್ಷರ ನೇತೃತ್ವದ ಪರಿಶೀಲನಾ ತಂಡಗಳಲ್ಲಿ ನಮ್ಮ ತಂಡ ವೈವಿಧ್ಯಮಯವಾಗಿದೆ‘ ಎಂದು ಬೈಡನ್ ತಂಡ ಹೇಳಿಕೊಂಡಿದೆ.

ನೂರಕ್ಕೂ ಹೆಚ್ಚು ಸದಸ್ಯರಿರುವ ಈ ಪರಿಶೀಲನಾ ತಂಡದಲ್ಲಿ ಅರ್ಧಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಹಾಲಿ ಸರ್ಕಾರದಲ್ಲಿ ಕಡಿಮೆ ಜನಸಂಖ್ಯೆಯಿರುವ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಶೇ 40 ಸದಸ್ಯರಿದ್ದಾರೆ.

ಪ್ರತಿ ಏಜೆನ್ಸಿಯ ಕಾರ್ಯಾಚರಣೆಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಸುಗಮವಾಗಿಸುವುದು, ನಿಯೋಜಿತ ಅಧ್ಯಕ್ಷ ಬೈಡನ್, ನಿಯೋಜಿತ ಉಪಾಧ್ಯಕ್ಷೆ ಕಮಲಾ ಅವರ ಸಚಿವ ಸಂಪುಟದ ಮೊದಲ ದಿನದ ಕಾರ್ಯಾಚರಣೆಗೆ ವೇದಿಕೆ ಸಿದ್ಧಗೊಳಿಸುವುದು ಈ ಪರಿಶೀಲನಾ ತಂಡಗಳ ಜವಾಬ್ದಾರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.