ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಯಿನ್‌ ಉಲ್‌ ಹಕ್‌ ಭಾರತಕ್ಕೆ ಪಾಕಿಸ್ತಾನದ ನೂತನ ಹೈಕಮಿಷನರ್‌ 

Last Updated 21 ಮೇ 2019, 3:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಫ್ರಾನ್ಸ್‌ಗೆ ಪಾಕಿಸ್ತಾನದ ರಾಯಭಾರಿಯಾಗಿದ್ದ ರಾಜತಾಂತ್ರಿಕ ನಿಪುಣ ಮೊಯಿನ್‌ ಉಲ್‌ ಹಕ್‌ ಅವರನ್ನು ಭಾರತಕ್ಕೆ ತನ್ನ ಹೈಕಮಿಷನರ್‌ ಆಗಿ ಪಾಕಿಸ್ತಾನ ಸೋಮವಾರ ನೇಮಕ ಮಾಡಿದೆ.

ಹಲವು ದೇಶಗಳಲ್ಲಿ ಖಾಲಿ ಉಳಿದಿದ್ದ ಹೈಕಮಿಷನರ್‌ಗಳನ್ನು ನೇಮಕ ಮಾಡುವ ಸಂಬಂಧ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಅವರು ಸೋಮವಾರ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಮೋಯಿನ್‌ ಉಲ್‌ ಹಕ್‌ ಅವರನ್ನು ಭಾರತಕ್ಕೆ ನಿಯೋಜಿಸಿದರು. ಇದೇ ವೇಳೆ ಚೀನಾ ಮತ್ತು ಜಪಾನ್‌ಗೂ ತಮ್ಮ ಹೈಕಮಿನಷರ್‌ಗಳನ್ನು ಖಾನ್‌ ನೇಮಕ ಮಾಡಿದರು.

ಮೋಯಿನ್‌ ಉಲ್‌ ಹಕ್‌ ಅವರು ಭಾರತಕ್ಕೆ ನೇಮಕಗೊಳ್ಳುವುದಕ್ಕೂ ಮೊದಲು ಫ್ರಾನ್ಸ್‌ಗೆ ಪಾಕಿಸ್ತಾನದ ರಾಯಭಾರಿಯಾಗಿದ್ದರು. ಇದಕ್ಕೂ ಹಿಂದೆ ಪಾಕಿಸ್ತಾನದ ವಿದೇಶಾಂಗ ಕಚೇರಿಯಲ್ಲಿ ಹಿರಿಯ ಶಿಷ್ಟಾಚಾರ ಅಧಿಕಾರಿಯಾಗಿ ಅವರು ಕಾರ್ಯ ನಿರ್ವಹಿಸಿದ್ದರು.

ಭಾರತಕ್ಕೆ ಈ ಮೊದಲು ಹೈಕಮಿಷನರ್‌ ಆಗಿದ್ದ ಸುಹೇಲ್‌ ಮೊಹಮದ್‌ ಅವರನ್ನು ಪಾಕಿಸ್ತಾನಸರ್ಕಾರ ತನ್ನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡಿತ್ತು. ಹೀಗಾಗಿ ಭಾರತದಲ್ಲಿನ ಹೈಕಮಿಷನರ್‌ ಹುದ್ದೆ ತೆರವಾಗಿತ್ತು.

ಮೋಯಿನ್‌ ಉಲ್‌ ಹಕ್‌ ನೇಮಕದ ಕುರಿತು ಮಾತನಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವ, ‘ನವದೆಹಲಿ... ಅಂದರೆ, ಭಾರತ ನಮಗೆ ಅತ್ಯಂತ ಮುಖ್ಯ. ಹಲವು ಮಹತ್ವದ ಸಮಾಲೋಚನೆಗಳ ನಂತರ ಮೋಯಿನ್‌ ಉಲ್‌ ಹಕ್‌ ಅವರನ್ನು ನೇಮಕ ಮಾಡಲು ನಿರ್ಧರಿಸಿದ್ದೇವೆ. ಅಲ್ಲಿ ಚುನಾವಣೆಗಳು ಮುಕ್ತಾಯಗೊಂಡಿವೆ. ನೂತನ ಸರ್ಕಾರ ರಚನೆಯಾದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವು ಪ್ರಕ್ರಿಯೆಗಳು ಆರಂಭವಾಗಬಹುದು. ಈ ಸಂದರ್ಭದಲ್ಲಿ ಮೋಯಿನ್‌ ಅವರುಉತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸ ನಮಗಿದೆ,’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT