ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಫ್ಘನ್‌ ತಾಲಿಬಾನ್‌ಗೆ ಬೆಂಬಲ ನೀಡದಿರಲು ಪಾಕ್‌ ನಿರ್ಧಾರ

Published 9 ನವೆಂಬರ್ 2023, 15:13 IST
Last Updated 9 ನವೆಂಬರ್ 2023, 15:13 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ನಿಷೇಧಿತ ಭಯೋತ್ಪಾದಕ ಸಂಘಟನೆ ತೆಹ್ರೀಕ್‌–ಎ–ತಾಲಿಬಾನ್‌ ಪಾಕಿಸ್ತಾನವನ್ನು (ಟಿಟಿಪಿ) ಹದ್ದುಬಸ್ತಿನಲ್ಲಿಡಲು ಅಫ್ಗಾನಿಸ್ತಾನ ವಿಫಲವಾಗಿದೆ ಎಂಬ ಕಾರಣಕ್ಕೆ ಪಾಕಿಸ್ತಾನವು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಫ್ಘನ್‌ನ ತಾಲಿಬಾನ್‌ ಪ್ರಕರಣಗಳನ್ನು ಬೆಂಬಲಿಸದಿರಲು ನಿರ್ಧರಿಸಿದೆ.  ಅಲ್ಲದೆ ಕಾಬುಲ್‌ಗೆ ಇತರ ಯಾವುದೇ ನೆರವನ್ನು ಒದಗಿಸದಿರಲೂ ಪಾಕ್‌ ನಿರ್ಧಾರ ತೆಗೆದುಕೊಂಡಿದೆ ಎಂದು ಮಾಧ್ಯಮವೊಂದು ಗುರುವಾರ ವರದಿ ಮಾಡಿದೆ.

ಅಫ್ಘನ್‌ನ ತಾಲಿಬಾನ್‌ ಸರ್ಕಾರಕ್ಕೆ ಇತರ ಯಾವುದೇ ರೀತಿಯ ವಿಶೇಷ ಸವಲತ್ತುಗಳನ್ನು ವಿಸ್ತರಿಸದಿರಲು ಪಾಕ್‌ ನಿರ್ಣಯಿಸಿರುವುದು, ಎರಡು ನೆರೆ ಹೊರೆಯ ದೇಶಗಳ ಸಂಬಂಧ ಬಿಗಡಾಯಿಸಿರುವುದನ್ನು ಸೂಚಿಸತ್ತದೆ ಎಂದು ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿದೆ.

ಉಗ್ರ ಸಂಘಟನೆಯಾಗಿರುವ ಟಿಟಿಪಿಯು ಅಫ್ಘನ್‌ ತಾಲಿಬಾನ್‌ ಜತೆ ಸೈದ್ಧಾಂತಿಕವಾಗಿ ಸಂಪರ್ಕ ಹೊಂದಿದೆ. ಪಾಕಿಸ್ತಾನ್‌ ತಾಲಿಬಾನ್ ಎಂದೂ ಗುರುತಿಸಿಕೊಂಡಿರುವ ಈ ನಿಷೇಧಿತ ಸಂಘಟನೆಯು ಹಲವು ಉಗ್ರ ಸಂಘಟನೆಗಳೊಂದಿಗೆ ಜಾಲ ಬೆಸೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT