ಲಾಹೋರ್: ತನ್ನ ಕೊಲೆಗೆ ಸಂಚು ನಡೆಯುತ್ತಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆತಂಕ ವ್ಯಕ್ತಪಡಿಸಿದ್ದಾರೆ.

ಕೊಲೆಯಾದರೆ ಅಪರಾಧಿಗಳು ಯಾರು ಎಂಬುದು ಇತ್ತೀಚೆಗೆ ತಾನು ರೆಕಾರ್ಡ್ ಮಾಡಿ ಸುರಕ್ಷಿತ ಸ್ಥಳದಲ್ಲಿ ಇಟ್ಟಿರುವ ವಿಡಿಯೊ ಸಂದೇಶದಿಂದ ಜನರಿಗೆ ತಿಳಿಯಲಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಪಂಜಾಬ್ ಪ್ರಾಂತ್ಯದ ಸಿಯಾಲ್‌ಕೋಟ್‌ನಲ್ಲಿ ರ‍್ಯಾಲಿಯಲ್ಲಿ ಮಾತನಾಡಿದ ಇಮ್ರಾನ್ ಖಾನ್, ಕೊಲೆಯ ಸಂಚಿನ ಬಗ್ಗೆ ಇತ್ತೀಚೆಗೆ ತಿಳಿದುಬಂದಿದೆ. ರಾಷ್ಟ್ರದ ಒಳಗೆ ಮತ್ತು ಹೊರಗೆ ರಹಸ್ಯವಾಗಿ ಸಂಚು ನಡೆದಿದೆ. ಇದರಲ್ಲಿ ಭಾಗಿಯಾಗಿರುವ ಎಲ್ಲರ ಹೆಸರನ್ನು ವಿಡಿಯೊ ಸಂದೇಶದಲ್ಲಿ ದಾಖಲಿಸಿಟ್ಟಿದ್ದೇನೆ. ನನಗೆ ಏನಾದರೂ ಸಂಭವಿಸಿದರೆ ಜನರಿಗೆ ವಿಡಿಯೊ ಸಂದೇಶದ ಮೂಲಕ ಅಪರಾಧಿಗಳು ಯಾರು ಎಂಬುದು ತಿಳಿಯಲಿದೆ ಎಂದಿದ್ದಾರೆ.

ಕಾರು ಅಪಘಾತ: ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ ಆ್ಯಂಡ್ರ್ಯೂ ಸೈಮಂಡ್ಸ್ ಸಾವು

'ರೆಕಾರ್ಡ್ ಮಾಡಲಾಗಿರುವ ವಿಡಿಯೊ ಸಂದೇಶವನ್ನು ಸುರಕ್ಷಿತವಾಗಿ ಇಡಲಾಗಿದೆ' ಎಂದು ಇಮ್ರಾನ್ ಹೇಳಿದ್ದಾರೆ.

ತನ್ನ ನೇತೃತ್ವದ ಸರ್ಕಾರವನ್ನು ಪತನಗೊಳಿಸುವ ಸಂಚಿನಲ್ಲಿ ಅಮೆರಿಕದ ಪಾತ್ರವಿದೆ ಎಂದು ನಿರಂತರವಾಗಿ ಆಪಾದಿಸುತ್ತ ಬಂದಿರುವ ಇಮ್ರಾನ್ ಖಾನ್, ಅಪರಾಧಿಗಳ ಕೈಗೆ ದೇಶದ ಚುಕ್ಕಾಣಿಯನ್ನು ಕೊಡುವ ಬದಲು ಅಣುಬಾಂಬ್ ಹಾಕುವುದು ಉತ್ತಮ ಎಂದಿದ್ದರು.

ಅಪರಾಧಿಗಳಿಗೆ ದೇಶದ ಚುಕ್ಕಾಣಿ ಕೊಡುವ ಬದಲು ಅಣುಬಾಂಬ್ ಹಾಕುವುದೇ ಮೇಲು: ಇಮ್ರಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.