ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಲಾಹೋರ್ನ ಕೋಟೆಯಲ್ಲಿರುವ ಲವ ದೇವಸ್ಥಾನದ ಪುನರ್ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಲವ ದೇಗುಲದ ಜೊತೆಗೆ ಸ್ಮಾರಕಗಳಾದ ಸಿಖ್ಖರ ಹಮ್ಮಾಮ್ ಹಾಗೂ ಮಹಾರಾಜ ರಂಜಿತ್ ಸಿಂಗ್ ಅವರಿಂದ ನಿರ್ಮಾಣವಾಗಿದ್ದ ಅಷ್ಟದ್ವಾರ ಮಂಟಪವನ್ನು ಆಗಾ ಖಾನ್ ಸಾಂಸ್ಕೃತಿಕ ಸೇವಾ ಕೇಂದ್ರದ ಸಹಯೋಗದಲ್ಲಿ ಪುನರುಜ್ಜೀವನಗೊಳಿಸಲಾಗಿದೆ ಎಂದು ವಾಲ್ಡ್ ಸಿಟಿ ಲಾಹೋರ್ ಪ್ರಾಧಿಕಾರ (ಡಬ್ಲ್ಯುಸಿಎಲ್ಎ) ಮಂಗಳವಾರ ತಿಳಿಸಿದೆ.

ಲಾಹೋರ್ ಕೋಟೆಯ ಒಳಗಿರುವ ಲವ ದೇವಾಲಯವು ಇದೀಗ ಐತಿಹಾಸಿಕ ಸ್ಮಾರಕ. ಭಗವಾನ್ ರಾಮನ ಪುತ್ರರಲ್ಲಿ ಒಬ್ಬರಾದ ಲವನಿಗೆ ಸಮರ್ಪಿತವಾಗಿರುವ ದೇಗುಲ. ಲವನ ದೇಗುಲ ಇಲ್ಲಿರುವುದರಿಂದಲೇ ಲಾಹೋರ್ ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಹಿಂದೂಗಳದ್ದು. 2018ರಲ್ಲಿ ಭಾಗಶಃ ಪುನರುಜ್ಜೀವನಗೊಂಡಿತ್ತು.

ಪುನರ್ನಿರ್ಮಾಣ ಕಾರ್ಯದಲ್ಲಿ ತಂತ್ರಜ್ಞಾನ ಬಳಸಲಾಗಿದೆ. ಇದು ಲಾಹೋರ್ ಕೋಟೆಯ ಸಾಂಸ್ಕೃತಿಕ ಸಿರಿಯನ್ನು ಹೆಚ್ಚಿಸಿದೆ ಎಂದು ಡಬ್ಲ್ಯುಸಿಎಲ್ಎ ವಕ್ತಾರರಾದ ತಾನಿಯಾ ಖುರೇಷಿ ತಿಳಿಸಿದ್ದಾರೆ.

ಸಿಖ್ ಆಡಳಿತದಲ್ಲಿ (1799–1849) ನಿರ್ಮಾಣಗೊಂಡಿದ್ದ ನೂರಕ್ಕೂ ಹೆಚ್ಚು ಸ್ಮಾರಕಗಳನ್ನು ಲಾಹೋರ್ ಕೋಟೆಯಲ್ಲಿ ಸಿಖ್ ಸಂಶೋಧಕರು ಕಳೆದ ವರ್ಷ ಪತ್ತೆ ಹಚ್ಚಿದ್ದರು. ಅವುಗಳ ಐತಿಹಾಸಿಕ ಮಹತ್ವವನ್ನು ವಿವರಿಸಿದ್ದರು. ಅವುಗಳಲ್ಲಿ ಅಂದಾಜು 30 ಸ್ಮಾರಕಗಳು ಇಂದು ಅಸ್ತಿತ್ವದಲ್ಲೇ ಇಲ್ಲ ಎಂಬುದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.