ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧು ನದಿ ಒಪ್ಪಂದ: ತೀವ್ರ ಆಂದೋಲನ ನಡೆಸಲು ಪಾಕಿಸ್ತಾನ ನಿರ್ಧಾರ

ಮಾತುಕತೆಗೆ ಭಾರತ ಹಿಂದೇಟು
Last Updated 23 ಅಕ್ಟೋಬರ್ 2018, 17:23 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: 1960ರ ಸಿಂಧು ನದಿ ಒಪ್ಪಂದಕ್ಕೆ ಸಂಬಂಧಿಸಿದ ತನ್ನ ಕಳವಳ ಕುರಿತಂತೆ ತೀವ್ರವಾಗಿ ಹೋರಾಟ ನಡೆಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಾಣವಾಗುತ್ತಿರುವ ಎರಡು ಜಲವಿದ್ಯುತ್‌ ಯೋಜನೆಗಳ ಬಗ್ಗೆ ಎರಡು ರಾಷ್ಟ್ರಗಳ ನಡುವಿನ ಮಾತುಕತೆ ಮುಂದೂಡಿಕೆಯಾದ ಬೆನ್ನಲ್ಲೆ, ಪಾಕಿಸ್ತಾನ ಸರ್ಕಾರ ಈ ನಿಲುವು ತಳೆದಿದೆ.

ಪಕಲ್‌ದುಲ್‌ ಪ್ರದೇಶದಲ್ಲಿ 1 ಸಾವಿರ ಮೆಗಾವ್ಯಾಟ್‌ ಸಾಮರ್ಥ್ಯ ಹಾಗೂ ಕಲ್ನಾಯಿಯಲ್ಲಿ 48 ಮೆಗಾವ್ಯಾಟ್‌ ಸಾಮರ್ಥ್ಯದ ಅಣೆಕಟ್ಟು ನಿರ್ಮಾಣಕ್ಕೆ ಭಾರತ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದೆ. ಈ ಯೋಜನೆಗೆ ಪಾಕಿಸ್ತಾನ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ.

‘ಈ ಯೋಜನೆಗಳ ಕುರಿತಂತೆ ಗೊಂದಲ ಬಗೆಹರಿಸಲುಆಗಸ್ಟ್‌ 29–30ರಂದು ಸಭೆ ನಡೆಸಿದ್ದ ಭಾರತ, ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ಅಣೆಕಟ್ಟು ನಿರ್ಮಾಣ ಸ್ಥಳಕ್ಕೆ ನಿಯೋಗ ಕರೆದೊಯ್ಯುವುದಾಗಿ ಭಾರತ ಖಚಿತ ಆಶ್ವಾಸನೆ ನೀಡಿತ್ತು, ಸ್ಥಳೀಯ ಸಂಸ್ಥೆ ಚುನಾವಣೆ ಕಾರಣ ಅಕ್ಟೋಬರ್‌ 7ರಿಂದ 12 ನಡೆಯಲಿದೆ ಎಂದು ಮಾಹಿತಿ ನೀಡಿತ್ತು’ ಎಂದು ಸಿಂಧುನದಿ ಆಯೋಗದ ಪಾಕಿಸ್ತಾನದ ಶಾಶ್ವತ ಪ್ರತಿನಿಧಿ ಸೈಯದ್‌ ಮೆಹರ್‌ ಶಾ ತಿಳಿಸಿದರು.

ದಿನಾಂಕ ಮುಂದೂಡಿಕೆಯಾದರೂ, ಸಭೆ ನಡೆದಿಲ್ಲ. ಇದೀಗ ಪಂಚಾಯಿತಿ ಚುನಾವಣೆ ನಡೆಯುತ್ತಿದೆ ಎಂದು ಭೇಟಿ ಬಗ್ಗೆ ಚಕಾರ ಎತ್ತಿಲ್ಲ ಎಂದು ದೂರಿದರು. ಕೆಲವು ದಿನಗಳ ಹಿಂದೆ ದೂರವಾಣಿಯಲ್ಲಿ ನಡೆಸಿದ ಮಾತುಕತೆ ಪ್ರಕಾರ, ಸದ್ಯಕ್ಕೆ ಯಾವುದೇ ಸಭೆ ನಡೆಯುವ ಸಾಧ್ಯತೆ ಕಂಡುಬರುತ್ತಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ನಾವು ಯಾವುದೇ ಬೆದರಿಕೆ ಒಡ್ಡುತ್ತಿಲ್ಲ, ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊರದೇಶಗಳಲ್ಲೂ ತೀವ್ರವಾದ ಹೋರಾಟ ನಡೆಸಲು ನಿರ್ಧರಿಸಲಾಗಿದೆ’ ಎಂದು ಪಾಕಿಸ್ತಾನದ ಜಲಸಂಪನ್ಮೂಲ ಸಚಿವ ಫೈಸಲ್‌ ವಾವ್ದಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT