ಬುಧವಾರ, 16 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಸದ್ಯಕ್ಕೆ ವೃತ್ತಿಯ ಬದಲಾವಣೆಯ ಯೋಚನೆ ಸರಿಯಲ್ಲ
Published 15 ಜುಲೈ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇಂದು ನಿಮ್ಮ ಎಣಿಕೆಯಂತೆ ಕಾರ್ಯಗಳು ಸಿದ್ಧಿಸುವುದು. ನಿಮ್ಮ ಆರೋಗ್ಯವು ದಿನದಿಂದ ದಿನಕ್ಕೆ ಸುಧಾರಿಸುತ್ತದೆ. ವೃತ್ತಿ ಜೀವನದಲ್ಲಿರುವ ಮಾನಸಿಕ ಒತ್ತಡ ಸ್ವಲ್ಪ ಕಡಿಮೆಯಾಗಲಿದೆ.
ವೃಷಭ
ವಿದೇಶ ಅಥವಾ ದೂರ ಸಂಚಾರದ ಯೋಗವಿದೆ. ಬಂಧುಗಳ ಸಹಾಯದಿಂದ ಪುತ್ರನಿಗೆ ಕಾರ್ಯಾನುಕೂಲವಾಗುವುದು. ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು.
ಮಿಥುನ
ಕೌಟುಂಬಿಕ ಶಾಂತಿಗೋಸ್ಕರವಾಗಿ ಸದಾ ತಾಳ್ಮೆಯಿಂದ ವ್ಯವಹರಿಸಿ. ಅಕ್ಕ-ಪಕ್ಕದವರನ್ನು ತಾತ್ಸಾರವಾಗಿ ಭಾವಿಸಬೇಡಿ. ರಸಗೊಬ್ಬರ ವ್ಯಾಪಾರ ಮಾಡುವವರಿಗೆ ಲಾಭದ ಜೊತೆ ಆಯಾಸವೂ ಕಾಡಲಿದೆ.
ಕರ್ಕಾಟಕ
ಕೌಟುಂಬಿಕ ಶಾಂತಿಗೋಸ್ಕರವಾಗಿ ಸದಾ ತಾಳ್ಮೆಯಿಂದ ವ್ಯವಹರಿಸಿ. ಅಕ್ಕ-ಪಕ್ಕದವರನ್ನು ತಾತ್ಸಾರವಾಗಿ ಭಾವಿಸಬೇಡಿ. ರಸಗೊಬ್ಬರ ವ್ಯಾಪಾರ ಮಾಡುವವರಿಗೆ ಲಾಭದ ಜೊತೆ ಆಯಾಸವೂ ಕಾಡಲಿದೆ.
ಸಿಂಹ
ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗುವುದು. ನಿಮ್ಮೆದುರು ಹಲವಾರು ಅವಕಾಶಗಳು ಎದುರಾಗುವುದರಿಂದ ಗೊಂದಲಕ್ಕೆ ಈಡಾಗುವಿರಿ. ಆಂಜನೇಯನ ಸೇವೆ ಮಾಡುವುದರಿಂದ ಗೊಂದಲ ನಿವಾರಣೆಯಾಗುತ್ತದೆ.
ಕನ್ಯಾ
ಆರ್ಥಿಕವಾಗಿ ಲಾಭಕ್ಕಾಗಿ ಹೋರಾಟ ನಡೆಸಬೇಕಿದೆ. ಕಾರ್ಯವನ್ನು ಜಯಿಸುವ ಹಂಬಲದಲ್ಲಿ ಆರೋಗ್ಯವನ್ನು ಕಳೆದುಕೊಳ್ಳಬೇಡಿ. ಎತ್ತರದಲ್ಲಿ ಹತ್ತಿ ಕೆಲಸ ಮಾಡುವವರು, ಸಾಹಸ ಪ್ರವೃತ್ತಿಯವರು ಜಾಗೃತರಾಗಿರಿ.
ತುಲಾ
ಸಮಸ್ಯೆಗಳು ಮತ್ತು ದುಃಖಗಳೆರಡೂ ತನ್ನ ಇರುವಿಕೆಯನ್ನು ತಿಳಿಸಲಿವೆ. ನಿಜ ಮಾರ್ಗದಿಂದ ಕಾರ್ಯಪ್ರವೃತ್ತರಾದಲ್ಲಿ ಹೆಚ್ಚಿನ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ಉನ್ನತ ವ್ಯಾಸಂಗದವರಿಗೆ ನೇರ ಆಯ್ಕೆಗೊಳ್ಳುವ ಸಂಭವವಿದೆ.
ವೃಶ್ಚಿಕ
ಬಹುದಿನಗಳ ನಿರೀಕ್ಷೆಯ ವಿಚಾರಗಳು ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸಿದಲ್ಲಿ ಲಾಭ ಕಾಣುವಿರಿ. ನವದಂಪತಿಗಳಿಗೆ ಸಂತಾನ ಭಾಗ್ಯದ ಫಲ ದೊರೆಯಲಿದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸುವುದು.
ಧನು
ಜೀವನದಲ್ಲಿ ಕೆಲವು ವಿಚಾರಗಳಲ್ಲಿ ಆತಂಕ ಮೂಡಿ ಮನೋಧೈರ್ಯವನ್ನು ಕಟ್ಟಿಹಾಕಿಕೊಳ್ಳುತ್ತದೆ. ಅಭಿವೃದ್ಧಿಯಲ್ಲಿ ಹಿನ್ನಡೆ ಕಾಣಲಿದ್ದೀರಿ. ಚಿನ್ನ–ಬೆಳ್ಳಿ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಅಪಕೀರ್ತಿ ಉಂಟಾಗುವ ಸಾಧ್ಯತೆ ಇದೆ.
ಮಕರ
ನಿಮ್ಮ ಯೋಜನೆಗಳು ಕಾರ್ಯಗತಗೊಳ್ಳಲು ಹೆಚ್ಚಿನ ಪ್ರಯತ್ನ ನಡೆಸಬೇಕಾಗುವುದು. ಮಹಾ ಗಣಪತಿಯ ಮೊರೆ ಹೋಗುವುದರಿಂದ ಕಾರ್ಯ ಸಿದ್ಧಿಯಾಗಲಿದೆ. ದಿನಾಂತ್ಯದಲ್ಲಿ ಶಿರೋವೇದನೆ ಎದುರಾಗಬಹುದು.
ಕುಂಭ
ಆಗು-ಹೋಗುಗಳನ್ನು ಅರಿತು ವ್ಯವಹಾರದಲ್ಲಿ ಮುಂದುವರೆಯಿರಿ. ಮಹತ್ವದ ನಿರ್ಧಾರ ಕೈಗೊಳ್ಳಲು ಕಾದು ನೋಡುವ ತಂತ್ರ ಅನುಸರಿಸುವುದು ಸೂಕ್ತ. ಸದ್ಯಕ್ಕೆ ವೃತ್ತಿಯ ಬದಲಾವಣೆಯ ಯೋಚನೆ ಸರಿಯಲ್ಲ.
ಮೀನ
ಪ್ರಮುಖ ವಿಚಾರಗಳಲ್ಲಿ ಮುಂದಿನ ಹೆಜ್ಜೆಯಿಡಲು ಸೂಕ್ತ ಸಮಯವಲ್ಲ. ಸಂಬಂಧಗಳನ್ನು ಉಳಿಸಿ ಕಾಪಾಡುವುದರಲ್ಲಿ ಜಯವಿರುತ್ತದೆ. ಹನುಮ ಸಮೇತನಾದ ಶ್ರೀರಾಮನ ಪರಿವಾರವನ್ನು ಆರಾಧಿಸಿ ಶ್ರೇಯೋವಂತರಾಗಿರಿ.
ADVERTISEMENT
ADVERTISEMENT