ಜೆರುಸಲೇಂ: ಟೆಲ್ ಅವೀವ್ನ ಬಾರ್ವೊಂದರಲ್ಲಿ ಗುಂಡಿನ ದಾಳಿ ನಡೆಸಿದ್ದ ಪ್ಯಾಲೆಸ್ಟೀನ್ ವ್ಯಕ್ತಿಯನ್ನು ಇಸ್ರೇಲ್ನ ಭದ್ರತಾ ಪಡೆಗಳು ಶುಕ್ರವಾರ ಹತ್ಯೆ ಮಾಡಿವೆ.
ಹಂತಕ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವಿಗೀಡಾಗಿದ್ದರು. ದಾಳಿಯ ಬಳಿಕ ತಲೆಮರೆಸಿಕೊಂಡಿದ್ದ ಆತನಿಗಾಗಿ ಇಸ್ರೇಲ್ನ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಜಾಫಾದ ಮಸೀದಿ ಸಮೀಪ ಅವಿತುಕೊಂಡಿದ್ದ ಹಂತಕನ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿ ಹತ್ಯೆ ಮಾಡಿವೆ.
ಗುರುವಾರ ರಾತ್ರಿ ಟೆಲ್ ಅವೀವ್ನ ಪಬ್ನೊಳಗೆ ಪ್ರವೇಶಿಸಿದ್ದ ಹಂತಕ, ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ ಇಬ್ಬರು ಮೃತಪಟ್ಟರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ಬಳಿಕ ಹಂತಕನಿಗಾಗಿ ನಗರದಾದ್ಯಂತ ಭದ್ರತಾ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು.