ವಾಷಿಂಗ್ಟನ್: ಅಮೆರಿಕವನ್ನು ಕೊರೊನಾ ವೈರಸ್ಗಿಂತಲೂ ಮುಂಚಿನ ಸ್ಥಿತಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದರ ನಡುವೆಯೇ ಚುನಾವಣಾ ಪ್ರಚಾರಕ್ಕೆ ಚಾಲನೆಯನ್ನೂ ನೀಡಿದ್ದಾರೆ.

ಜನ ಇನ್ನೂ ಗುಂಪುಗೂಡುವುದು ಸಮಂಜಸವಲ್ಲ ಎಂಬ ವೈದ್ಯರ ಸಲಹೆಗಳ ನಡುವೆಯೂ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ರ್ಯಾಲಿಗಳು ನಿಗದಿಯಾಗುತ್ತಿವೆ.

ಆದರೆ, ರ್ಯಾಲಿಗಳಿಗೆ ಹಾಜರಾಗುವವರೇನಾದರೂ ಕೊರೊನಾ ವೈರಸ್ ಸೋಂಕಿಗೆ ತುತ್ತಾದರೆ, ಅದಕ್ಕೆ ಅವರು ರ್ಯಾಲಿಯನ್ನಾಗಲಿ, ಟ್ರಂಪ್ ಅವರನ್ನಾಗಲಿ ದೂಷಿಸುವಂತಿಲ್ಲ, ದೂರುವಂತಿಲ್ಲ.

‘ನಾವು ರ್ಯಾಲಿಯಲ್ಲಿ ಭಾಗವಹಿಸಲು ಇಚ್ಚಿಸುತ್ತಿರುವ ಜಾಗವು ಕೋವಿಡ್ 19ನ ಅಪಾಯವಿದೆ ಎಂಬುದನ್ನು ಮೊದಲೇ ತಿಳಿದಿರುವುದಾಗಿ ಒಪ್ಪಿಕೊಳ್ಳಬೇಕು,’ ಎಂದು ಟ್ರಂಪ್ ಅವರ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಒಪ್ಪಿಕೊಂಡ ನಂತರವೇ ಅವರು ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.

‘ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ, ನೀವು ಮತ್ತು ಅತಿಥಿಗಳು ಕೋವಿಡ್ 19ಗೆ ಒಡ್ಡಿಕೊಳ್ಳುವುದಕ್ಕೆ ಸಂಬಂಧಿಸಿದ ಎಲ್ಲಾ ಅಪಾಯಗಳನ್ನು ಸ್ವಯಂಪ್ರೇರಣೆಯಿಂದ ಒಪ್ಪಿಕೊಳ್ಳಬೇಕು. ಇದಕ್ಕಾಗಿ ಟ್ರಂಪ್ ಮತ್ತು ಅವರಿಗೆ ಸಂಬಂಧಿಸಿದ ಯಾರನ್ನೂ ದೂಷಿಸಬಾರದು,’ ಎಂದು ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.

ಡೊನಾಲ್ಡ್ ಟ್ರಂಪ್ ಅವರ ರ್ಯಾಲಿಯು ಟೆಲ್ಸಾದ ಬಿಒಕೆ ಕೇಂದ್ರದಲ್ಲಿ ಜೂನ್ 19ರಂದು ನಡೆಯಲಿದೆ. ಈ ಕೇಂದ್ರದಲ್ಲಿ 19 ಸಾವಿರ ಮಂದಿ ಕೂರಲು ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.