ಫಿಲಿಡೆಲ್ಫಿಯಾ: ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದಫಿಲಿಡೆಲ್ಪಿಯಾ ನಗರದಲ್ಲಿಬುಧವಾರ ಭೀಕರ ಅಗ್ನಿ ದುರಂತ ಸಂಭವಿಸಿದೆ.
ನಗರದ ವಸ್ತು ಸಂಗ್ರಹಾಲಯದ ಬಳಿಯ 23 ನೇ ಬೀದಿಯ ಬಹುಮಹಡಿ ವಸತಿ ಕಟ್ಟಡವೊಂದರಲ್ಲಿ ಘಟಿಸಿದ ಅಗ್ನಿ ದುರಂತದಲ್ಲಿ 8 ಮಕ್ಕಳು ಸೇರಿದಂತೆ 12 ಜನ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಕಟ್ಟಡದಲ್ಲಿ 26 ಜನ ವಾಸಿಸುತ್ತಿದ್ದರು. ಸಾವು ನೋವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರಂತಫಿಲಿಡೆಲ್ಪಿಯಾ ನಗರದಲ್ಲಿ ಶತಮಾನದ ಅತಿದೊಡ್ಡ ಅಗ್ನಿದುರಂತ ಎಂದು ಹೇಳಲಾಗಿದೆ.ಕಟ್ಟಡದಲ್ಲಿ ನಾಲ್ಕು ಅಗ್ನಿಶಾಮಕ ಅಲರಾಂಗಳಿದ್ದವು. ಆದರೆ, ಅವು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದಾರೆ.