ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲಿಪ್ಪೀನ್ಸ್: ಸೈಬರ್‌ ದಾಳಿಗೆ ಚೀನಾ ಮೂಲದ ಹ್ಯಾಕರ್‌‌ಗಳ ಯತ್ನ

Published 5 ಫೆಬ್ರುವರಿ 2024, 13:43 IST
Last Updated 5 ಫೆಬ್ರುವರಿ 2024, 13:43 IST
ಅಕ್ಷರ ಗಾತ್ರ

ಮನಿಲಾ: ಫಿಲಿಪ್ಪೀನ್ಸ್‌ನ ಅಧ್ಯಕ್ಷರು, ಸರ್ಕಾರಿ ಸಂಸ್ಥೆ ಮತ್ತು ಸಾಗರ ಸುರಕ್ಷತೆಗೆ ಸಂಬಂಧಿಸಿದ ವೆಬ್‌ಸೈಟ್‌ ಹಾಗೂ ಇ–ಮೇಲ್‌ ವ್ಯವಸ್ಥೆಗಳ ಮೇಲೆ ಚೀನಾ ಮೂಲದ ಹ್ಯಾಕರ್‌ಗಳು ಸೈಬರ್‌ ದಾಳಿ ‌ನಡೆಸಲು ಯತ್ನಿಸಿ ವಿಫಲರಾಗಿದ್ದಾರೆ’ ಎಂದು ಮಾಹಿತಿ ಮತ್ತು ಸಂವಹನ ಸಚಿವಾಲಯದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

‘ಮಾಹಿತಿ ಮತ್ತು ಸಂವಹನ ಸಚಿವಾಲಯದ ಇ–ಮೇಲ್, ರಾಷ್ಟ್ರೀಯ ಕರಾವಳಿ ಕಣ್ಗಾವಲಿನ ವೆಬ್‌ಸೈಟ್‌, ಫಿಲಿಪ್ಪೀನ್ಸ್ ಅಧ್ಯಕ್ಷ ಫೆರ್ಡಿನಂಡ್‌ ಮಾರ್ಕೋಸ್‌ ಜೆ.ಆರ್‌ ಅವರ ವೈಯಕ್ತಿಕ ವೆಬ್‌ಸೈಟ್‌ಗಳ ಮೇಲೆ ಈಚೆಗೆ ನಡೆದ ಸೈಬರ್‌ ದಾಳಿಯು ವಿಫಲವಾಗಿದೆ’ ಎಂದು ಸಚಿವಾಲಯದ ವಕ್ತಾರ ರೆನಾಟೊ ಪರೈಸೊ ಅವರು ಡಿ.ಡಬ್ಲ್ಯೂ.ಪಿ.ಎಂ ರೇಡಿಯೊಗೆ ತಿಳಿಸಿದ್ದಾರೆ.

‘ನಾವು ಯಾವುದೇ ದೇಶದ ಮೇಲೆ ಆರೋಪ ಹೊರಿಸುವುದಿಲ್ಲ. ಆದರೆ, ಇಂಟರ್‌ನೆಟ್‌ ಪ್ರೋಟೊಕಾಲ್‌ ಅಡ್ರೆಸ್‌ ಬಳಕೆಯಿಂದ ಚೀನಾದ ಹೆಸರನ್ನು ಉಲ್ಲೇಖಿಸಬಹುದು. ಹ್ಯಾಕರ್‌ಗಳು ಚೀನಾಕ್ಕೆ ಸೇರಿದ ಯುನಿಕಾಂ ಸೇವೆಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ’ ಎಂದು ತಿಳಿಸಿದ್ದಾರೆ.

‘ಈ ರೀತಿಯ ದಾಳಿಗಳನ್ನು ನಿಯಂತ್ರಿಸಲು ಸಹಕರಿಸುವಂತೆ ಚೀನಾ ಸರ್ಕಾರಕ್ಕೆ ಮನವಿ ಮಾಡಿದ್ದೇವೆ‘ ಎಂದರು.

ಯುನಿಕಾಂ ಮತ್ತು ಫಿಲಿಪ್ಪೀನ್ಸ್‌ನಲ್ಲಿರುವ ಚೀನಾದ ರಾಯಭಾರ ಕಚೇರಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT