Photos| ಚೀನಾ ಜೊತೆಗಿನ ಮನಸ್ತಾಪದ ನಡುವೆಯೇ ತೈವಾನ್ ಭಾರಿ ಸಮರಾಭ್ಯಾಸ
ತೈವಾನ್, ಅಮೆರಿಕ, ಭಾರತದ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ಚೀನಾದ ಸಂಬಂಧ ಕೆಟ್ಟಿದೆ. ಈ ಮಧ್ಯೆ ದಕ್ಷಿಣ ಚೀನಾದ ಸಮುದ್ರದಲ್ಲಿ ಚೀನಾ ಕೈಗೊಂಡಿರುವ ಚಟುವಟಿಕೆಗಳು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಪರಿಸ್ಥಿತಿ ಹೀಗಿರುವಾಗಲೇ ತೈಚುಂಗ್ ನಗರದಲ್ಲಿ ತೈವಾನ್ ಸೇನೆಯು ಗುರುವಾರ ಸಮರಭ್ಯಾಸ ನಡೆಸಿತು. ‘ಲೈವ್ ಫೈರ್, ಆ್ಯಂಟಿ ಲ್ಯಾಂಡಿಂಗ್ ಹಾನ್ ಕುವಾಂಗ್ ಮಿಲಿಟರಿ ಎಕ್ಸರ್‌ಸೈಸ್’ ಹೆಸರಿನ ಸೇನಾ ಅಭ್ಯಾಸದಲ್ಲಿ ಹೆಲಿಕಾಪ್ಟರ್‌ಗಳು, ಟ್ಯಾಂಕರ್‌ಗಳು, ಹವಿಟ್ಸರ್ (ಫಿರಂಗಿ), ಕ್ಷಿಪಣಿ ಉಡಾವಣಾ ವಾಹನಗಳು ಭಾಗವಹಿಸಿದ್ದವು. ಐದು ದಿನಗಳ ಈ ಸಮರಾಭ್ಯಾಸ ಶುಕ್ರವಾರ ಕೊನೆಗೊಳ್ಳಲಿದೆ.
Published : 16 ಜುಲೈ 2020, 5:17 IST