ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೊಮಾಲಿಯಾ | ಹೋಟೆಲ್ ಮೇಲೆ ಉಗ್ರರ ದಾಳಿ: 9 ಮಂದಿ ಸಾವು

Published 10 ಜೂನ್ 2023, 14:23 IST
Last Updated 10 ಜೂನ್ 2023, 14:23 IST
ಅಕ್ಷರ ಗಾತ್ರ

ಮೊಗದಿಶು, ಸೊಮಾಲಿಯಾ (ಎಪಿ‌): ರಾಜಧಾನಿ ಮೊಗದಿಶುವಿನ ಹೋಟೆಲ್ ಮೇಲೆ ಅಲ್ ಶಬಾಬ್‌ ಉಗ್ರರು  ಶುಕ್ರವಾರ ರಾತ್ರಿ ನಡೆಸಿದ ದಾಳಿಯಲ್ಲಿ ಮೂವರು ಸೈನಿಕರು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟು, ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭದ್ರತಾ ಪಡೆಗಳು ಪರ್ಲ್ ಬೀಚ್‌ ಹೋಟೆಲ್‌‌ನಿಂದ 84 ಜನರನ್ನು ರಕ್ಷಿಸಿವೆ. ಅಲ್‌–ಕೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಅಲ್-ಶಬಾಬ್ ದಾಳಿಯ ಹೊಣೆ ಹೊತ್ತಿಕೊಂಡಿದೆ. 

ಪರ್ಲ್ ಬೀಚ್ ಹೋಟೆಲ್ ಒಳಗೆ ಕೆಲವರು ಸಿಲುಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT