ವಾಷಿಂಗ್ಟನ್: ಅಗತ್ಯ ಆಹಾರ ಮತ್ತು ಪೌಷ್ಟಿಕಾಂಶದ ಕೊರತೆಯಿಂದ ಭಾರತದಲ್ಲಿ ಪ್ರತಿವರ್ಷ ನೂರಾರು ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ಲ್ಯಾನ್ಸೆಟ್ ವರದಿ ಹೇಳಿದೆ.

ಜಾಗತಿಕವಾಗಿ ಪ್ರತಿ ಐವರಲ್ಲಿ ಒಬ್ಬರ ಸಾವಿಗೆ ಪೌಷ್ಟಿಕಾಂಶ ಕೊರತೆ ಕಾರಣವಾಗುತ್ತಿದೆ ಎಂದು ಲ್ಯಾನ್ಸೆಟ್ ವರದಿ ಹೇಳಿದೆ.

ಅಂದರೆ, ವಿಶ್ವದಲ್ಲಿ ಪ್ರತಿವರ್ಷ 1.10 ಕೋಟಿ ಮಂದಿ ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ.

ಪ್ರಪಂಚದ 195 ರಾಷ್ಟ್ರಗಳಲ್ಲಿ 1990ರಿಂದ 2017ರವರೆಗೆ ಪರಿಸ್ಥಿತಿ ಅವಲೋಕಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಬಹುತೇಕ ಎಲ್ಲ ದೇಶಗಳಲ್ಲಿಯೂ ಈ ಸಮಸ್ಯೆ ಇದೆ ಎಂದು ವರದಿ ಹೇಳಿದೆ.

ಭಾರತ, ಅಮೆರಿಕ, ಬ್ರೆಜಿಲ್, ಪಾಕಿಸ್ತಾನ, ನೈಜಿರಿಯಾ, ರಷ್ಯಾ, ಈಜಿಪ್ಟ್, ಜರ್ಮನಿ, ಇರಾನ್ ಮತ್ತು ಟರ್ಕಿಯಲ್ಲಿ ಜನ ದಿನಕ್ಕೆ 125 ಗ್ರಾಂಗಳಿಗಿಂತ ಕಡಿಮೆ ಆಹಾರ ಸೇವಿಸುತ್ತಿರುವುದು ಪೌಷ್ಟಿಕಾಂಶ ಕೊರತೆಗೆ ಕಾರಣವಾಗುತ್ತಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಒಂದು ಲಕ್ಷಮಂದಿಯಲ್ಲಿ ಅಪೌಷ್ಟಿಕತೆಯಿಂದ ಸಾವಿಗೀಡಾಗುವವರ ಸಂಖ್ಯೆ ಇಂಗ್ಲೆಂಡ್ನಲ್ಲಿ 127 ಇದ್ದರೆ, ಅಮೆರಿಕದಲ್ಲಿ 171 ಇದೆ. ಚೀನಾದಲ್ಲಿ ಈ ಸಂಖ್ಯೆ 350 ಇದೆ.

ಹಣ್ಣುಗಳು, ಪೌಷ್ಟಿಕಾಂಶ ಹೆಚ್ಚಿರುವ ಧಾನ್ಯ (ಗೋಡಂಬಿ, ಬಾದಾಮಿ) ಹಾಗೂ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವಂತೆ ಮಾಡಬೇಕು. ಉಪ್ಪು, ಸಕ್ಕರೆ ಮತ್ತು ಕೊಬ್ಬಿನಾಂಶವಿರುವ ಆಹಾರವನ್ನು ಜನರಿಗೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಕ್ರಿಸ್ಟೋಫರ್ ಮರ್ರೆ ಹೇಳುತ್ತಾರೆ.

ಅಪೌಷ್ಟಿಕತೆ ಎನ್ನುವುದು ವಿಶ್ವದಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಆಹಾರ ಸುರಕ್ಷತೆ ಮತ್ತು ಪೌಷ್ಟಿಕತೆ ಬಗ್ಗೆ ಎಲ್ಲ ರಾಷ್ಟ್ರಗಳೂ ಗಮನಹರಿಸಬೇಕಾದ ಅಗತ್ಯವಿದೆ.
-ಕ್ರಿಸ್ಟೋಫರ್ ಮರ್ರೆ, ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.