ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ಅವರ ನಿಧನದಿಂದಾಗಿ ವ್ಯಾಟಿಕನ್ ಸಿಟಿಯಲ್ಲಿ ಹಲವು ಧಾರ್ಮಿಕ ಪ್ರಕ್ರಿಯೆಗಳಿಗೆ ಚಾಲನೆ ಸಿಗಲಿದೆ. ಹೊಸ ಪೋಪ್ ಆಯ್ಕೆಯಾಗುವವರೆಗೆ ವಿವಿಧ ವಿಧಿವಿಧಾನಗಳು ನಡೆಯಲಿವೆ.

ಹೊಸ ಪೋಪ್ ಆಯ್ಕೆಯಾಗುವವರೆಗಿನ ಅವಧಿಯನ್ನು ಕ್ಯಾಥೋಲಿಕ್ ಚರ್ಚ್ನ ‘ಸೆಡ್ ವೆಕೆಂಟೆ’ (ಖಾಲಿ ಅವಧಿ) ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ದೈನಂದಿನ ಕೆಲಸಗಳನ್ನು ಹಿರಿಯ ಕಾರ್ಡಿನಲ್ ನಿರ್ವಹಿಸುತ್ತಾರೆ.
.ಪೋಪ್ ಫ್ರಾನ್ಸಿಸ್ ಪ್ರೀತಿ ಹಾಗೂ ಸಹಾನುಭೂತಿಯ ಸಂಕೇತ: ಸಿಎಂ ಸಿದ್ದರಾಮಯ್ಯ.
ಕಾರ್ಡಿನಲ್ ಅವರನ್ನು ‘ಕ್ಯಾಮೆರ್ಲೆಂಗೊ’ ಎಂದು ಸಂಬೋಧಿಸಲಾಗುತ್ತದೆ. 2019ರಲ್ಲಿ ಪೋಪ್ ಫ್ರಾನ್ಸಿಸ್ ನೇಮಿಸಿದ ಐರಿಷ್–ಅಮೆರಿಕನ್ ಕೆವಿನ್ ಫಾರೆಲ್ ಅವರು ಈಗಿನ ಸನ್ನಿವೇಶದಲ್ಲಿ ಆ ಕೆಲಸವನ್ನು ನಿರ್ವಹಿಸಲಿದ್ದಾರೆ.

‘ಕ್ಯಾಮೆರ್ಲೆಂಗೊ’ ಹೊರತುಪಡಿಸಿ ಚರ್ಚ್ನ ಅಧಿಕಾರದಲ್ಲಿರುವ ಎಲ್ಲರೂ ಪೋಪ್ ನಿಧನದ ಕೂಡಲೇ ರಾಜೀನಾಮೆ ನೀಡಬೇಕು.

ಸಾಂಪ್ರದಾಯಿಕವಾಗಿ, ‘ಕ್ಯಾಮೆರ್ಲೆಂಗೊ’ ಅವರ ಪ್ರಮುಖ ಕೆಲಸ ಪೋಪ್ ಅವರ ಮರಣವನ್ನು ದೃಢೀಕರಿಸುವುದು. ವಿಶೇಷ ಬೆಳ್ಳಿಯ ಸುತ್ತಿಗೆಯಿಂದ ಪೋಪ್ ತಲೆಗೆ ತಟ್ಟಿ, ಅವರ ಹುಟ್ಟು ಹೆಸರನ್ನು ಕರೆಯುತ್ತಾರೆ.
.PHOTOS | ಪೋಪ್ ಫ್ರಾನ್ಸಿಸ್ ನಿಧನ; 88 ವರ್ಷಗಳ ಸಾರ್ಥಕ ಪಯಣ.
ಪೋಪ್ ಧರಿಸಲೆಂದೇ ವಿಶೇಷವಾಗಿ ತಯಾರಿಸಲಾಗುವ ಫಿಶರ್ಮ್ಯಾನ್ಸ್ ರಿಂಗ್ (Fisherman's Ring) ಎಂದು ಕರೆಯಲ್ಪಡುವ ಚಿನ್ನದ ಉಂಗುರವನ್ನು ಒಡೆದು ಹಾಕಲಾಗುತ್ತದೆ. ಈ ಉಂಗುರವನ್ನು ದಾಖಲೆಗಳಿಗೆ ಮೊಹರು ಹಾಕಲು ಬಳಸಲಾಗುತ್ತಿತ್ತು.

ಈ ಹಿಂದೆ ನಕಲನ್ನು ತಡೆಯಲು ಉಂಗುರವನ್ನು ಒಡೆದು ಹಾಕಲಾಗುತ್ತಿತ್ತು. ಈಗ ಕಾರ್ಡಿನಲ್ಗಳ ಸೆಡ್ ವೆಕೆಂಟೆ ಸಮಾವೇಶದಲ್ಲಿ ಹಾಲಿ ಪೋಪ್ ಅಧಿಕಾರ ಕೊನೆಗೊಂಡಿದೆ ಎನ್ನುವ ಸೂಚಕವಾಗಿ ಉಂಗುರವನ್ನು ಒಡೆದು ಹಾಕಲಾಗುತ್ತದೆ.

ಜಗತ್ತಿನಾದ್ಯಂತ ಇರುವ ಕಾರ್ಡಿನಲ್ಗಳು ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಈ ಸಭೆಯನ್ನು ‘ಜನರಲ್ ಕಾಂಗ್ರೆಗೇಷನ್ಸ್’ (general congregations) ಎನ್ನಲಾಗುತ್ತದೆ.

ಕಾರ್ಡಿನಲ್ಗಳು ಮೃತದೇಹ ಸಂಸ್ಕಾರದ ದಿನವನ್ನು ನಿಶ್ಚಿಯಿಸುತ್ತಾರೆ. ಇದು ಸಾವಿನ ನಾಲ್ಕು ದಿನಗಳ ಬಳಿಕ ಆರು ದಿನಗಳ ಒಳಗಾಗಿ ನಡೆಯಬೇಕು.
.ಪೋಪ್ ಫ್ರಾನ್ಸಿಸ್ ನಿಧನ: ಸಂಪ್ರದಾಯಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದ ಸುಧಾರಣಾವಾದಿ.
ಫ್ರಾನ್ಸಿಸ್ ಅವರ ಹಿಂದಿನ ಪೋಪ್ ಅವರನ್ನು ವ್ಯಾಟಿಕನ್ ಸಿಟಿಯ ಸಂತ ಪೀಟರರ ಬೆಸಿಲಿಕಾದಲ್ಲಿ (St Peter's Basilica) ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಫ್ರಾನ್ಸಿಸ್ ಅವರು ತಮ್ಮನ್ನು ರೋಮ್ನಲ್ಲಿರುವ ಸಂತ ಮರಿಯಾ ಮಗ್ಗಿಯೋರ್ ಬೆಸಿಲಿಕಾದಲ್ಲಿ ಅಂತ್ಯ ಸಂಸ್ಕಾರ ಮಾಡಬೇಕು ಎಂದು ತಿಳಿಸಿದ್ದಾರೆ.

ಅವರ ಪಾರ್ಥೀವ ಶರೀರವನ್ನು ಮರ ಹಾಗೂ ಸತುವಿನಿಂದ ಮಾಡಲಾದ ಶವಪೆಟ್ಟಿಯಲ್ಲಿ ಇರಿಸಲಾಗುತ್ತದೆ. ಬಳಿಕ ಸಂಪ್ರದಾಯದ ಪ್ರಕಾರ ಅದನ್ನು ಒಡೆಯಲಾಗುತ್ತದೆ.
.ಇನ್ನೂ ನಡೆಯದ ಪೋಪ್ ಆಯ್ಕೆ.
ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಅವರ ಪಾರ್ಥೀವ ಶರೀರವನ್ನು ಭಕ್ತರ ದರ್ಶನಕ್ಕೆ ಇಡಲಾಗುತ್ತದೆ. ಸಾಂಪ್ರದಾಯಿಕವಾಗಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ಮೃತದೇಹವನ್ನು ಇಡಲಾಗುತ್ತದೆ.

ಫ್ರಾನ್ಸಿಸ್ ಅವರ ಸಂಭಾವ್ಯ ಉತ್ತರಾಧಿಕಾರಿಗಳಾದ ‘ಪಾಪಾಬಿಲಿ’ಯನ್ನು ಆಯ್ಕೆ ಮಾಡಲು ಸಭೆಗಳು ನಡೆಯುತ್ತಿರುತ್ತವೆ. ಪೋಪ್ ಮರಣದ 15 ದಿನಗಳ ಬಳಿಕ 20 ದಿನಗಳು ಮೀರದೆ ಕೊನೆಯ ಸಭೆಯ ದಿನಾಂಕ ನಿಗದಿ ಮಾಡಲಾಗುತ್ತದೆ. ಈ ಅವಧಿಯಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಇರುವ ಕಾರ್ಡಿನಲ್ಗಳು ವ್ಯಾಟಿಕನ್ಗೆ ಬರುತ್ತಾರೆ.
.ಧಾರ್ಮಿಕ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೊರತು ಶಾಂತಿ ಅಸಾಧ್ಯ: ಪೋಪ್ ಫ್ರಾನ್ಸಿಸ್.
ಚುನಾವಣೆಯು ಭಾರಿ ಗೌಪ್ಯವಾಗಿ ನಡೆಯುತ್ತದೆ. ಮತದಾನ ಪ್ರಕ್ರಿಯೆಯ ಸಮಯದಲ್ಲಿ ಕಾರ್ಡಿನಲ್ಗಳು ಗೋಪ್ಯತೆಗೆ ಪ್ರತಿಜ್ಞೆ ಮಾಡುತ್ತಾರೆ. ಹೊರಗಿನ ಪ್ರಪಂಚದ ಸಂಪರ್ಕದಿಂದ ದೂರವಿರುತ್ತಾರೆ.

ಯಾರಿಗೂ ಪ್ರವೇಶ ಇರದ ಕೋಣೆಯಲ್ಲಿ ಕಾರ್ಡಿನಲ್ಗಳು ಮಲಗುತ್ತಾರೆ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ, ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಲು ಅವರಿಗೆ ಅವಕಾಶ ಇರುವುದಿಲ್ಲ. ಮೊಬೈಲ್ ಫೋನ್, ರೇಡಿಯೋ, ದೂರದರ್ಶನ ಮತ್ತು ಪತ್ರಿಕೆಗಳೂ ಅವರಿಗೆ ನೀಡಲಾಗುವುದಿಲ್ಲ. ಮನೆಗೆಲಸ ಮತ್ತು ಭದ್ರತಾ ಸಿಬ್ಬಂದಿ ಕೂಡ ಗೋಪ್ಯತೆ ಪಾಲಿಸುವುದಾಗಿ ಪ್ರತಿಜ್ಞೆ ಮಾಡುತ್ತಾರೆ. ಹೊಸ ಪೋಪ್ ಆಯ್ಕೆಯಾಗುವವರೆಗೂ ಕಾರ್ಡಿನಲ್ಗಳು ಅಲ್ಲಿಯೇ ಇರಬೇಕು.

80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಡಿನಲ್ಗಳು ಮಾತ್ರ ಚುನಾವಣೆಗೆ ಸ್ಪರ್ಧೆ ಮಾಡಬಹುದು. ಕಾರ್ಡಿನಲ್ಗಳ ತಮ್ಮ ಮತಗಳನ್ನು ಚಲಾಯಿಸಿದ ನಂತರ, ಮತಪತ್ರಗಳನ್ನು ಮಿಶ್ರಣ ಮಾಡಿ ಎಣಿಕೆ ಮಾಡಲಾಗುತ್ತದೆ. ಪೋಪ್ ಆಗಿ ಆಯ್ಕೆಯಾಗಲು ಮೂರನೇ ಎರಡರಷ್ಟು ಮತಗಳನ್ನು ಪಡೆಯಬೇಕು.

ಪ್ರತಿ ಮತದಾನದ ನಂತರ, ಮತಪತ್ರಗಳನ್ನು ಸುಡಲಾಗುತ್ತದೆ. ಯಾವುದೇ ಅಭ್ಯರ್ಥಿಯು ಸಾಕಷ್ಟು ಮತಗಳನ್ನು ಪಡೆಯದಿದ್ದರೆ, ಸಿಸ್ಟೀನ್ ಚಾಪೆಲ್ನ ಚಿಮಣಿಯಿಂದ ಕಪ್ಪು ಹೊಗೆ ಮೇಲೇರುತ್ತದೆ. ಪೋಪ್ ಆಯ್ಕೆ ಪೂರ್ಣವಾಗಿಲ್ಲ, ಮತದಾನ ಮುಂದುವರಿಯಲಿದೆ ಎಂದು ಹೊರ ಜಗತ್ತಿಗೆ ಸೂಚನೆ ನೀಡಲು ಈ ಕ್ರಮ ಅನುಸರಿಸಲಾಗುತ್ತದೆ.
.ಗಂಭೀರ ಸ್ಥಿತಿಯಲ್ಲೇ ಮುಂದುವರಿದ ಪೋಪ್ ಫ್ರಾನ್ಸಿಸ್ ಆರೋಗ್ಯ.
ಒಬ್ಬ ಅಭ್ಯರ್ಥಿ ಮೂರನೇ ಎರಡರಷ್ಟು ಮತಗಳನ್ನು ಪಡೆಯುವವರೆಗೆ ಪ್ರತಿದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಮತಪತ್ರಗಳನ್ನು ನೀಡಲಾಗುತ್ತದೆ. ಪ್ರತಿ ಅಧಿವೇಶನದ ಕೊನೆಯಲ್ಲಿ, ಮತಪತ್ರಗಳನ್ನು ಚಾಪೆಲ್ನ ಒಲೆಯ ಮೇಲೆ ಸುಡಲಾಗುತ್ತದೆ. ಅಪೋಸ್ಟೋಲಿಕ್ ಅರಮನೆಯ ಮೇಲೆ ಹೊಗೆಯನ್ನು ಬಿಡಲಾಗುತ್ತದೆ.

ಆಯ್ಕೆ ಯಶಸ್ವಿಯಾದರೆ ಬಿಳಿ ಬಣ್ಣದ ಹೊಗೆ ಬರುತ್ತದೆ. ಬಿಳಿ ಹೊಗೆ ಬರುವಾಗ ಸಂತ ಪೀಟರರ ಬೆಸಿಲಿಕಾದಲ್ಲಿ ಘಂಟನಾದ ಮೊಳಗುತ್ತದೆ.

ಸದ್ಯ 135 ಕಾರ್ಡಿನಲ್ಗಳಿದ್ದು, ಇದರಲ್ಲಿ 108 ಮಂದಿಯನ್ನು ಫ್ರಾನ್ಸಿಸ್ ನೇಮಕ ಮಾಡಿದವರು. ಈ ಪೈಕಿ ಯೂರೋಪಿನ 53, ಉತ್ತರ ಅಮೆರಿಕದ 20, ಆಫ್ರಿಕಾದ 18, ಏಷ್ಯಾದ 23, ಓಷಿಯಾನಿಯಾದ 4 ಮತ್ತು ದಕ್ಷಿಣ ಅಮೆರಿಕದ 17 ಮಂದಿ ಇದ್ದಾರೆ.
.ಶೀಘ್ರದಲ್ಲೇ ಪೋಪ್ ಫ್ರಾನ್ಸಿಸ್ ಭಾರತ ಭೇಟಿ: ಗೋವಾ ಸಚಿವ.
ಹೊಸದಾಗಿ ಆಯ್ಕೆಯಾದ ಪೋಪ್ ಅವರನ್ನು ‘ಸಲಾ ಡೆಲ್ಲೆ ಲ್ಯಾಕ್ರಿಮ್‘ ಅಥವಾ ಕಣ್ಣೀರಿನ ಕೊಠಡಿ ಎಂದು ಕರೆಯಲ್ಪಡುವ ಸಿಸ್ಟೀನ್ ಚಾಪೆಲ್ನ ಒಂದು ಸಣ್ಣ ಪವಿತ್ರ ಮಂದಿರಕ್ಕೆ ಕರೆದೊಯ್ಯಲಾಗುತ್ತದೆ. ಪೋಪ್ ಆಗಿ ಅಧಿಕಾರ ಸ್ವೀಕರಿಸುವುದು ಅಥವಾ ಮುಂದುವರಿಯದೇ ಇರುವುದರ ಬಗ್ಗೆ ಅವರು ಅಲ್ಲಿ ನಿರ್ಧರಿಸಬಹುಸು.

ಹೊಸದಾಗಿ ಆಯ್ಕೆಯಾದ ಪೋಪ್ಗೆ ತಮ್ಮ ಆಯ್ಕೆಯನ್ನು ಒಪ್ಪಿಕೊಳ್ಳಲು ಕಾರ್ಡಿನಲ್ಗಳ ಡೀನ್ (ಸದ್ಯ ಕಾರ್ಡಿನಲ್ ಜಿಯೋವಾನಿ ಬಟಿಸ್ಟಾ ರೆ ಅವರು ಇದ್ದಾರೆ) ಕೇಳಿಕೊಳ್ಳುತ್ತಾರೆ. ಅಲ್ಲದೆ ಮುಂದೆ ಬಳಕೆ ಮಾಡಲು ಬಯಸುವ ಹೆಸರನ್ನೂ ಸೂಚಿಸಲು ತಿಳಿಸುತ್ತಾರೆ. ಅದಾದ ಕೂಡಲೇ ಅವರು ರೋಮ್ನ ಬಿಷಪ್ ಹಾಗೂ ಪೋಪ್ ಆಗಿ ಆಯ್ಕೆಯಾದಂತೆ.
.ಜಾಗತಿಕ ಅಸಹಿಷ್ಣುತೆ ಶಮನಕ್ಕೆ ನಾರಾಯಣ ಗುರು ಬೋಧನೆ ಸಹಕಾರಿ: ಪೋಪ್ ಫ್ರಾನ್ಸಿಸ್.
ವಿವಿಧ ಗಾತ್ರಗಳಲ್ಲಿ ತರಿಸಿದ ಮೂರು ಸೆಟ್ ವಸ್ತ್ರವನ್ನು ನೂತನ ಪೋಪ್ ಅವರಿಗೆ ಧರಿಸಲಾಗುತ್ತದೆ. ಕಾರ್ಡಿನಲ್ಗಳು ಒಬ್ಬೊಬ್ಬರಾಗಿ ಗೌರವ ಸಲ್ಲಿಸುತ್ತಾರೆ.

ಅದಾದ ಕೆಲ ಹೊತ್ತಲ್ಲೇ, ಸಂತ ಪೀಟರರ ಬೆಸಿಲಿಕಾದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಹಿರಿಯ ಕಾರ್ಡಿನಲ್ ಡಿಕಾನ್ (ಸದ್ಯ ರೆನಾಟೊ ರಫೆಲ್ ಮಾರ್ಟಿನೊ ಅವರಿದ್ದಾರೆ) ಪ್ರಖ್ಯಾತ ಲ್ಯಾಟಿನ್ ಭಾಷೆಯಲ್ಲಿ ’Habemus Papam’ (ಹೊಸ ಪೋಪ್ ಸಿಕ್ಕಿದ್ದಾರೆ) ಎಂದು ಹೇಳುತ್ತಾರೆ.

(ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಬರೆಯಲಾಗಿದೆ)
.ಪೋಪ್ ಫ್ರಾನ್ಸಿಸ್ ನಿಧನ: ಹೊಸ ಪೋಪ್ ಆಯ್ಕೆ ಹೇಗೆ? .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.