ವಾಷಿಂಗ್ಟನ್: ಕೊರೊನಾವೈರಸ್ ಸಾಂಕ್ರಾಮಿಕದಿಂದ ಸಂಕಷ್ಟದಲ್ಲಿರುವ ಅಮೆರಿಕದ ಪ್ರಜೆಗೆ ಪ್ರೋತ್ಸಾಹಧನವಾಗಿ ಘೋಷಿಸಿರುವ ₹ 44,306 (600 ಡಾಲರ್) ಹಣ ಯಾವುದಕ್ಕೂ ಸಾಕಾಗುವುದಿಲ್ಲ. ಹಾಗಾಗಿ, ಅದನ್ನು ₹ 1,47,688 (2 ಸಾವಿರ ಡಾಲರ್‌ಗೆ) ಹೆಚ್ಚಿಸಬೇಕು ಎಂದು ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಪ್ರತಿಪಾದಿಸಿದ್ದಾರೆ.

ಈಗ ಘೋಷಿಸಿರುವ 600 ಡಾಲರ್ ಹಣ, ಕೇವಲ ಬಾಡಿಗೆ ಪಾವತಿ ಮತ್ತು ಆಹಾರ ಖರೀದಿಸುವುದಕ್ಕೂ ಸಾಕಾಗುವುದಿಲ್ಲ. ಹಾಗಾಗಿ ಇದನ್ನು ಪರಿಹಾರದ ಆರಂಭಿಕ ಮೊತ್ತ (ಡೌನ್ ಪೇಂಟ್)ವಾಗಿಟ್ಟು ಕೊಳ್ಳಬೇಕು ಎಂದು ಬೈಡನ್ ಹೇಳಿದ್ದಾರೆ.

‘ಕೊರೊನಾವೈರಸ್ ಸಾಂಕ್ರಾಮಿಕದ ಪ್ರೋತ್ಸಾಹ ಧನವಾಗಿ 2 ಸಾವಿರ ಡಾಲರ್ ಚೆಕ್ ಅನ್ನು ತಕ್ಷಣ ನೀಡಬೇಕೆಂಬ ಮಹತ್ವದ ವಿಚಾರದಲ್ಲಿ ಎರಡೂ ಸದನಗಳಲ್ಲಿ ತಮ್ಮ ಪಕ್ಷ ಹಿಡಿತ ಸಾಧಿಸಿತ್ತು‘ ಎಂದೂ ಅವರು ತಿಳಿಸಿದ್ದಾರೆ.

ನಿರ್ಗಮಿತ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಕೊರೊನಾವೈರಸ್ ಸಾಂಕ್ರಾಮಿಕ ಪರಿಹಾರವಾಗಿ 2ಸಾವಿರ ಡಾಲರ್ ಚೆಕ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲೂ(ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ) ಕೂಡ ಪರಿಹಾರ ನೀಡುವ ಮಸೂದನೆಯನ್ನು ಅಂಗೀಕರಿಸಿತ್ತು. ಆದರೂ, ಮೇಲ್ಮನೆಯಲ್ಲಿ ಬಹುಮತ ಹೊಂದಿದ್ದ ರಿಪಬ್ಲಿಕನ್ ಪಕ್ಷದ ಸದಸ್ಯರು ಈ ಕ್ರಮವನ್ನು ತಡೆದಿದ್ದರು.

ಇಬ್ಬರು ಭಾರತೀಯ-ಅಮೆರಿಕನ್ ಸಂಸದರಾದ ರೋ ಖನ್ನಾ ಮತ್ತು ಪ್ರಮೀಳಾ ಜಯಪಾಲ್ ಅವರು ಕೂಡ ಅಮೆರಿಕನ್ನರಿಗೆ 2 ಸಾವಿರ ಡಾಲರ್ ಹಣವನ್ನು ‘ಉತ್ತೇಜಿತ ಪರಿಹಾರದ ಚೆಕ್(ಸ್ಟಿಮುಲಸ್ ಚೆಕ್) ನೀಡಬೇಕೆಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.