ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್: ಭಾರತೀಯ ಹೈಕಮಿಷನ್ ಕಟ್ಟಡದ ಎದುರು ಖಾಲಿಸ್ತಾನ ಪರ ಹೋರಾಟಗಾರರ ಪ್ರತಿಭಟನೆ

Published 2 ಅಕ್ಟೋಬರ್ 2023, 17:06 IST
Last Updated 2 ಅಕ್ಟೋಬರ್ 2023, 17:06 IST
ಅಕ್ಷರ ಗಾತ್ರ

ಲಂಡನ್: ಇಲ್ಲಿನ ಭಾರತೀಯ ಹೈ ಕಮಿಷನ್ ಕಟ್ಟಡದ ಎದುರು ಖಾಲಿಸ್ತಾನ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ. ಭಾರತ ವಿರೋಧಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗಿದ್ದಾರೆ.

ಕಳೆದ ತಿಂಗಳು ಕೆನಡಾದಲ್ಲಿ ನಡೆದ ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪಗಳ ಕುರಿತಂತೆ ಗಮನ ಸೆಳೆಯಲು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಿದ್ದ ‘ಬ್ರಿಟಿಷ್ ಸಿಖ್ ಗುಂಪು’ಗಳು ಈ ಪ್ರತಿಭಟನೆಯನ್ನು ಆಯೋಜಿಸಿದ್ದವು.

‘ಭಾಯಿ ಅವತಾರ್ ಸಿಂಗ್ ಖಾಂಡಾ ಅವರ ಅನುಮಾನಾಸ್ಪದ ಸಾವು ಸೇರಿದಂತೆ ಸಿಖ್ಖರು ವಿವಿಧ ದೇಶೀಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಿದ್ದಾರೆ’ಎಂದು ಪ್ರತಿಭಟನೆಯ ಕುರಿತಾದ ಪೋಸ್ಟ್‌ನಲ್ಲಿ ತಿಳಿಸಲಾಗಿತ್ತು.

ಸೆಂಟ್ರಲ್ ಲಂಡನ್‌ನ ಆಲ್ಡ್‌ವಿಚ್‌ನಲ್ಲಿರುವ ವಾಲ್ಡೋರ್ಫ್ ಹೋಟೆಲ್‌ನ ಬಳಿ ಸೇರಿದ್ದ ಗುಂಪನ್ನು ನಿರ್ಬಂಧಿಸಲು ಮೆಟ್ರೋಪಾಲಿಟನ್ ಪೊಲೀಸ್ ಅಧಿಕಾರಿಗಳು ಭದ್ರತೆ ಕೈಗೊಂಡಿದ್ದರು. ಕಾಲ್ನಡಿಗೆಯಲ್ಲಿ ಗಸ್ತು ತಿರುಗುತ್ತಿದ್ದರು.

ಪ್ರತಿಭಟನಾಕಾರರು ಪಂಜಾಬಿ ಭಾಷೆಯಲ್ಲಿ ಭಾಷಣಗಳನ್ನು ಮಾಡಿ ಖಾಲಿಸ್ತಾನ ಪರ ಘೋಷಣೆಗಳನ್ನು ಕೂಗಿದರು. ಸುಮಾರು ಎರಡು ಗಂಟೆಗಳ ಪ್ರತಿಭಟನೆಯ ವೇಳೆ ರಸ್ತೆಯುದ್ದಕ್ಕೂ ಹಲವಾರು ಪೊಲೀಸ್ ವಾಹನಗಳು ಗಸ್ತು ತಿರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT