ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ಸಾಧಿಸುವವರೆಗೆ ಉಕ್ರೇನ್‌ನಲ್ಲಿ ಶಾಂತಿ ನೆಲೆಸದು: ಪುಟಿನ್‌

Published 14 ಡಿಸೆಂಬರ್ 2023, 14:16 IST
Last Updated 14 ಡಿಸೆಂಬರ್ 2023, 14:16 IST
ಅಕ್ಷರ ಗಾತ್ರ

ಮಾಸ್ಕೊ: ‘ನಮ್ಮ ಗುರಿಗಳನ್ನು ಸಾಧಿಸುವವರೆಗೆ ಉಕ್ರೇನ್‌ನಲ್ಲಿ ಶಾಂತಿ ನೆಲೆಸದು’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ವರ್ಷಾಂತ್ಯದ ಸುದ್ದಿಗೋಷ್ಠಿಯಲ್ಲಿ ಪ್ರತಿಜ್ಞೆ ಮಾಡಿದರು.

ಉಕ್ರೇನ್‌ ಮೇಲಿನ ಆಕ್ರಮಣದ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ಅಧಿಕಾರದ ಹಿಡಿತವನ್ನು ತಾನು ಬಿಟ್ಟುಕೊಡುವುದಿಲ್ಲ ಎನ್ನುವ ಸಂದೇಶ ಅವರ ಮಾತಿನಲ್ಲಿ ವ್ಯಕ್ತವಾಯಿತು.

ಉಕ್ರೇನ್‌ ಮೇಲಿನ ಆಕ್ರಮಣವನ್ನು ವಿಶೇಷ ಸೇನಾ ಕಾರ್ಯಾಚರಣೆ ಎಂದು ರಷ್ಯಾ ಪ್ರತಿಪಾದಿಸಿರುವ ಈ ಯುದ್ಧದಲ್ಲಿ, ಉಕ್ರೇನ್‌ನಲ್ಲಿ ಹೋರಾಡಲು ಮೀಸಲು ಸೈನಿಕರ ಎರಡನೇ ಅಲೆ ಒಟ್ಟುಗೂಡಿಸುವ ಅಗತ್ಯವನ್ನು ಪುಟಿನ್‌ ತಳ್ಳಿಹಾಕಿದರು.

ರಷ್ಯಾದ ವೃತ್ತಿಪರ ಸೇನಾ ಪಡೆಗಳೊಂದಿಗೆ ಕೈಜೋಡಿಸಲು ಕರೆಸಿಕೊಂಡ ಸುಮಾರು 2.44 ಲಕ್ಷ ಸೈನಿಕರು ಸೇರಿ ಸುಮಾರು 6.17 ಲಕ್ಷ ರಷ್ಯಾ ಸೈನಿಕರು ಪ್ರಸ್ತುತ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

‘ಮೀಸಲು ಪಡೆಗಳನ್ನು ಒಟ್ಟುಗೂಡಿಸುವ ಅವಶ್ಯಕತೆ ಇಲ್ಲ. ದೇಶದಾದ್ಯಂತ ಪ್ರತಿದಿನ 1,500 ಜನರನ್ನು ಸೇನೆಗೆ ನೇಮಿಸಿಕೊಳ್ಳಲಾಗುತ್ತಿದೆ. ಬುಧವಾರ ಸಂಜೆಯ ಹೊತ್ತಿಗೆ ಒಟ್ಟು 4.86 ಲಕ್ಷ ಸೈನಿಕರು ರಷ್ಯಾ ಸೇನೆ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ’ ಎಂದು ಅವರು ಹೇಳಿದರು.

‘ಉಕ್ರೇನ್‌ನಲ್ಲಿ ಮಾಸ್ಕೊ ಸಾಧಿಸಲು ಹೊರಟಿರುವ ಗುರಿಗಳೆಂದರೆ ನಾಜಿಮುಕ್ತ, ನಿಶ್ಶಸ್ತ್ರೀಕರಣ ಮತ್ತು ತಟಸ್ಥ ನಿಲುವಿನ ದೇಶವಾಗಿರಿಸುವುದು. ಉಕ್ರೇನ್‌ ನ್ಯಾಟೊ ಸೇರಬಾರದು. ಈ ನಮ್ಮ ಗುರಿಗಳನ್ನು ಸಾಧಿಸುವವರೆಗೂ ಉಕ್ರೇನ್‌ನಲ್ಲಿ ಶಾಂತಿ ನೆಲಸದು’ ಎಂದು ಪುಟಿನ್‌ ಹೇಳಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT