ಜಕಾರ್ತಾ (ಎಪಿ): ಇಂಡೋನೇಷ್ಯಾದ ಪೂರ್ವ ಭಾಗದ ಸಮುದ್ರದ ಆಳದಲ್ಲಿ ಬುಧವಾರ ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪನ ಸಂಭವಿಸಿದೆ.

ಭೂಕಂಪನದ ತೀವ್ರತೆಗೆ ಕೆಲವೆಡೆ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಮಾಲುಕು ಪ್ರಾಂತ್ಯದಲ್ಲಿ ಸುನಾಮಿ ಏಳುವ ಆತಂಕದಿಂದ ಭಯಭೀತರಾದ ಕರಾವಳಿ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಡಲ ತೀರಕ್ಕೆ ತೆರಳದಂತೆ ಜನರಿಗೆ ಎಚ್ಚರಿಸಲಾಗಿದೆ.

ದೊಡ್ಡ ಸುನಾಮಿ ಉಂಟಾಗುವ ಅಪಾಯವಿಲ್ಲ. ಆದರೂ ಸಮುದ್ರ ಮಟ್ಟವು ಸುಮಾರು 0.5 ಮೀಟರ್ ಏರಿಕೆಯಾಗಿದೆ. ಬಹುಶಃ ಸಮುದ್ರದ ಆಳದಲ್ಲಿ ಆಗಿರುವ ಸ್ಫೋಟದಿಂದಾಗಿ ಇದು ಆಗಿರಬಹುದು ಎಂದು ಹವಾಮಾನ ಇಲಾಖೆ ಮತ್ತು ಭೂಗರ್ಭ ವಿಜ್ಞಾನ ಇಲಾಖೆ ತಿಳಿಸಿವೆ.

‘ಟೆಹೋರು ಉಪವಿಭಾಗದಲ್ಲಿ ಕೆಲವು ಕಟ್ಟಡಗಳ ಗೋಡೆಗಳು ಮತ್ತು ಮಹಡಿಗಳು ಬಿರುಕು ಬಿಟ್ಟಿವೆ. ಕರಾವಳಿಯ ನಿವಾಸಿಗಳು ಭೂಕಂಪನದಿಂದಾಗಿ ಭಯಭೀತರಾಗಿದ್ದಾರೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅವರಿಗೆ ಸೂಚಿಸಲಾಗಿದೆ’ ಎಂದು ಮಾಲುಕು ವಿಪತ್ತು ನಿಯಂತ್ರಣ ಏಜೆನ್ಸಿಯ ಮುಖ್ಯಸ್ಥ ಹೆನ್ರಿ ಫಾರ್ ಫಾರ್ ಹೇಳಿದರು.

ಮಾಲುಕು ಪ್ರಾಂತ್ಯದ ಸೆರಾಮ್ ದ್ವೀಪದಲ್ಲಿರುವ ಅಮಾಹೈ ನಗರದಿಂದ 70 ಕಿಲೋಮೀಟರ್ ದೂರದಲ್ಲಿ ಸಮುದ್ರದ ಆಳದಲ್ಲಿ ಸುಮಾರು 10 ಕಿಲೋಮೀಟರ್ (6 ಮೈಲಿ) ವ್ಯಾಪ್ತಿಯಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.