ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವಿರುದ್ಧ ಸಂಘಟಿತ ಹೋರಾಟ: ರಾಹುಲ್‌ಗಾಂಧಿ

‘ಪರ್ಯಾಯ ದೃಷ್ಟಿಕೋನ’ದೊಂದಿನ ಹೋರಾಟ ಅಗತ್ಯ –ರಾಹುಲ್‌ ಪ್ರತಿಪಾದನೆ
Published 3 ಜೂನ್ 2023, 16:23 IST
Last Updated 3 ಜೂನ್ 2023, 16:23 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಭಾರತದಲ್ಲಿ ಸದ್ಯ ಎರಡು ಸಿದ್ಧಾಂತಗಳ ನಡುವೆ ‘ಹೋರಾಟ’ ನಡೆದಿದ್ದು, ದೇಶಕ್ಕೆ ‘ಪರ್ಯಾಯ ದೃಷ್ಟಿಕೋನ’ ನೀಡಲು ಬಿಜೆಪಿಗೆ ವಿರುದ್ಧವಾಗಿ ಎಲ್ಲ ಪ್ರತಿಪಕ್ಷಗಳು ಕೈಜೋಡಿಸಲಿವೆ‘ಎಂದು ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ಆಶಿಸಿದ್ದಾರೆ.

ಭಾರತ ಮೂಲದ ಅಮೆರಿಕನ್‌ ಸಮುದಾಯದವರನ್ನು ಉದ್ದೇಶಿಸಿ ಶುಕ್ರವಾರ ಇಲ್ಲಿ ಮಾತನಾಡಿದ ಅವರು, ‘ನಾನು ಕಾಂಗ್ರೆಸ್ಸೇತರ ಪ್ರತಿಪಕ್ಷಗಳ ಮುಖಂಡರನ್ನು ಭೇಟಿಯಾದಾಗ ಪ್ರತಿಪಕ್ಷಗಳ ಒಗ್ಗೂಡುವಿಕೆಯ ಮಹತ್ವ ಕುರಿತಂತೆಯೇ ಒತ್ತಿ ಹೇಳುತ್ತೇನೆ’ ಎಂದರು.

‘ಈಗ ಮಾಧ್ಯಮದಲ್ಲಿರುವ ಹೆಚ್ಚಿನವರು ಬದುಕಿಗಿಂತಲೂ ಬಿಜೆಪಿ ದೊಡ್ಡದು, ಆರ್‌ಎಸ್‌ಎಸ್‌ ದೊಡ್ಡದು ಎಂದೇ ಬಿಂಬಿಸುತ್ತಿದ್ದಾರೆ. ದಯವಿಟ್ಟು ಹಿಮಾಚಲ ಪ್ರದೇಶ, ಕರ್ನಾಟಕದ ಚುನಾವಣೆಯತ್ತಲೂ ಒಮ್ಮೆ ಗಮನಿಸಿ. ಮುಂದೆ, ಮಧ್ಯಪ್ರದೇಶ, ಛತ್ತೀಸಗಢ, ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆಯಲಿವೆ. ಬಿಜೆಪಿಯನ್ನು ಸೋಲಿಸುವಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಸಾಮರ್ಥ್ಯವಿದೆ ಎಂಬುದು ನಿಮಗೆ ತಿಳಿಯುತ್ತದೆ’ ಎಂದು ಅವರು ಆತ್ಮವಿಶ್ವಾಸದಿಂದ ಹೇಳಿದರು.

‘ಪ್ರತಿಪಕ್ಷಗಳವರು ಒಟ್ಟುಗೂಡುತ್ತೇವೆ. ಆದರೆ, ಸ್ವತಂತ್ರ ಪಕ್ಷಗಳಾಗಿ ಪ್ರತ್ಯೇಕವಾಗಿ ಹೋರಾಡುತ್ತಿದ್ದೇವೆ. ಆದರೆ, ಭಾರತಕ್ಕಾಗಿ ಪರ್ಯಾಯ ದೃಷ್ಟಿಕೋನದ ದೃಷ್ಟಿಯಿಂದ ಹೋರಾಟ ನಡೆಸುವುದು ಈಗಿನ ಅಗತ್ಯವಾಗಿದೆ. ಆ ಬಗ್ಗೆಯೇ ಈಗ ಚಿಂತನೆ ನಡೆದಿದ್ದು, ಎಲ್ಲ ಪಕ್ಷಗಳು ಚರ್ಚೆಯಲ್ಲಿವೆ. ಈ ಚರ್ಚೆಯು ಪರಿಣಾಮಕಾರಿಯಾಗುವ ದಿಕ್ಕಿನಲ್ಲಿ ಸಾಗುತ್ತಿದೆ’ ಎಂದು ತಿಳಿಸಿದರು.

‘ದೇಶದಲ್ಲಿ ಎರಡು ದೃಷ್ಟಿಕೋನಗಳ ನಡುವಿನ ಸೈದ್ಧಾಂತಿಕ ಹೋರಾಟ ಇದಾಗಿದೆ. ಇದರಲ್ಲಿ ಒಂದು ಮಹಾತ್ಮಗಾಂಧಿಯವರ ಶಾಂತಿಯುತ, ಅಹಿಂಸಾತ್ಮಕವಾದ, ಸತ್ಯದ ಮಾರ್ಗ. ಇದರಲ್ಲಿ ದೇಶದ ಪ್ರಗತಿಯಲ್ಲಿ ಎಲ್ಲ ಜಾತಿ, ಧರ್ಮ, ಭಾಷೆಯವರು ಒಟ್ಟಾಗಿ ನಿಲ್ಲುತ್ತಾರೆ. ಎಲ್ಲರೂ ತಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಮುಕ್ತರಾಗಿರುತ್ತಾರೆ’ ಎಂದರು.

ಇನ್ನೊಂದು, ಆರ್‌ಎಸ್‌ಎಸ್‌ ರೂಪಿಸಿದ ದೃಷ್ಟಿಕೋನ. ಇಲ್ಲಿ ವಿಭಜನೆ ಚಿಂತನೆಯುಳ್ಳ ಅಹಂಕಾರ, ವೈಜ್ಞಾನಿಕವಲ್ಲದ ಆಕ್ರಮಣಶೀಲತೆ ಇದೆ. ಈಗಿನದು ಈ ಎರಡರ ನಡುವಿನ ಹೋರಾಟ. ಹಲವು ವರ್ಷಗಳಿಂದ ಅಂದರೆ ಸಾವಿರಾರು ವರ್ಷಗಳಿಂದ ಈ ಹೋರಾಟ ನಡೆದಿದೆ. ಆದರೆ, ನನಗೆ ವಿಶ್ವಾಸವಿದೆ. ಮಹಾತ್ಮ ಅವರ ದೃಷ್ಟಿಕೋನ, ಚಿಂತನೆ ಖಂಡಿತವಾಗಿ ಜಯಭೇರಿ ಬಾರಿಸಲಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT