ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ | ಅಮೆರಿಕದಲ್ಲಿ ಮೊಳಗಿದ ಜೈ ಶ್ರೀರಾಮ್ ಘೋಷಣೆ

Published 9 ಜನವರಿ 2024, 3:21 IST
Last Updated 9 ಜನವರಿ 2024, 3:21 IST
ಅಕ್ಷರ ಗಾತ್ರ

ಹೂಸ್ಟನ್: ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಮೆರಿಕದ ಹಿಂದೂ ಸಮುದಾಯದ ಸದಸ್ಯರು ಭಾನುವಾರ ಹೂಸ್ಟನ್‌ನಾದ್ಯಂತ ಬೃಹತ್ ಕಾರು ರ್‍ಯಾಲಿ ನಡೆಸಿದರು. ಈ ವೇಳೆ ದಾರಿಯುದ್ದಕ್ಕೂ ರಾಮನ ಕುರಿತ ಭಜನೆ ಹಾಗೂ 'ಜೈ ಶ್ರೀ ರಾಮ್' ಘೋಷಣೆಗಳು ಮೊಳಗಿದವು.

500ಕ್ಕೂ ಹೆಚ್ಚು ಉತ್ಸಾಹಿ ಸವಾರರು ರಾಮ ಮಂದಿರ, ಭಾರತ ಹಾಗೂ ಅಮೆರಿಕ ಧ್ವಜದ ಚಿತ್ರವಿರುವ ಕೇಸರಿ ಬ್ಯಾನರ್‌ಗಳನ್ನು ಹಿಡಿದು 216 ಕಾರುಗಳ ಮೂಲಕ ಸುಮಾರು ಐದು ಕಿ.ಮೀ ರ್‍ಯಾಲಿ ನಡೆಸಿದ್ದಾರೆ

ಹೂಸ್ಟನ್‌ನ ಮೀನಾಕ್ಷಿ ದೇವಾಲಯದಿಂದ ಪ್ರಾರಂಭವಾದ ರ್‍ಯಾಲಿ ರಿಚ್ಮಂಡ್‌ನ ಶಾರದ್ ಅಂಬಾ ದೇವಸ್ಥಾನದಲ್ಲಿ ಮಧ್ಯಾಹ್ನ ಮುಕ್ತಾಯವಾಯಿತು.

ಸುಮಾರು 2 ಸಾವಿರ ಭಕ್ತರು ವಿವಿಧ ದೇವಾಲಯಗಳಲ್ಲಿ ಭಜನೆಯೊಂದಿಗೆ ರ್‍ಯಾಲಿಯನ್ನು ಸ್ವಾಗತಿಸಿದರು.

'ಜೈ ಶ್ರೀ ರಾಮ್' ಘೋಷಣೆಗಳು ದೇವಾಲಯಗಳಲ್ಲಿ ಮೊಳಗಿದವು. ಭಕ್ತರು, ಭಜನೆ ಮಾಡುತ್ತಾ ರಾಮ ಭಕ್ತಿಯಲ್ಲಿ ಮಿಂದರು. ಭಕ್ತರೊಂದಿಗೆ ಈ ರೀತಿ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹಿತಾನುಭವ ನೀಡಿದೆ ಎಂದು ಲಿವಿಂಗ್ ಪ್ಲಾನೆಟ್ ಫೌಂಡೇಶನ್‌ನ ಸಂಸ್ಥಾಪಕಿ ಕುಸುಮ್ ವ್ಯಾಸ್ ಹೇಳಿದ್ದಾರೆ

ಹೂಸ್ಟನ್‌ನಲ್ಲಿ ಬೃಹತ್‌ ರ್‍ಯಾಲಿಯನ್ನು ಸ್ವಯಂಸೇವಕರಾದ ಅಚಲೇಶ್ ಅಮರ್, ಉಮಂಗ್ ಮೆಹ್ತಾ ಮತ್ತು ಅರುಣ್ ಮುಂದ್ರಾ ಎಂಬುವವರು ಆಯೋಜಿಸಿದ್ದರು.

‘ಕಾರು ರ್‍ಯಾಲಿ ಸಾಗಿ ಬಂದ ವಿವಿಧ ದೇವಾಲಯಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಯಿಸಿದ್ದರು. ಭಗವಾನ್ ಶ್ರೀರಾಮನು ಖಂಡಿತವಾಗಿಯೂ ಇಲ್ಲಿನ ಜನರ ಹೃದಯದಲ್ಲಿ ನೆಲೆಸಿದ್ದಾನೆ‘ ಎಂದು ವಿಎಚ್‌ಪಿಎ ಸದಸ್ಯರೂ ಆದ ಅಮರ್ ಹೇಳಿದ್ದಾರೆ.

‘ಹೂಸ್ಟನ್‌ನ ಹಲವು ದೇವಾಲಯಗಳ ಅಧಿಕಾರಿಗಳಿಗೆ ವಿಎಚ್‌ಪಿಎಯಿಂದ ಔಪಚಾರಿಕ ಆಹ್ವಾನ ಬಂದಿದೆ. ಅಯೋಧ್ಯೆಯ ಪವಿತ್ರವಾದ ಮಂತ್ರಾಕ್ಷತೆ 'ಗಂಗಾಜಲ', ರಾಮಾಯಣದ ಪ್ರತಿ ಸೇರಿದಂತೆ ಕೆಲವು ಸಿಹಿತಿಂಡಿಗಳನ್ನು ಒಳಗೊಂಡಿರುವ ಆಮಂತ್ರಣ ಬುಟ್ಟಿಯನ್ನು ಪಡೆದುಕೊಳ್ಳಲಾಗಿದೆ ಎಂದು ಸ್ವಯಂಸೇವಕರಾದ ಮುಂದ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT