ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್‌ನ ನೂತನ ಪ್ರಧಾನಿಯಾಗಿ ಸ್ರೆಥಾ  ಥವಿಸಿನ್

Published 22 ಆಗಸ್ಟ್ 2023, 14:02 IST
Last Updated 22 ಆಗಸ್ಟ್ 2023, 14:02 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಥಾಯ್ಲೆಂಡ್‌ನ 30ನೇ ಪ್ರಧಾನಿಯಾಗಿ ರಿಯಲ್ ಎಸ್ಟೇಟ್‌ ಉದ್ಯಮಿ, ಫ್ಯೂ ಥಾಯ್‌ ಪಕ್ಷದ ಸ್ರೆಥಾ ಥವಿಸಿನ್ ಅವರು ಆಯ್ಕೆಯಾಗುವುದು ಖಚಿತವಾಗಿದೆ. ಗೆಲುವಿಗೆ ಅಗತ್ಯವಿರುವಷ್ಟು ಮತಗಳನ್ನು ಸ್ರೆಥಾ ಅವರು ಪಡೆದಿದ್ದಾರೆ. ಸಂಸತ್ತಿನ ಆವರಣದಲ್ಲಿ ವ್ಯಕ್ತಿಯೊಬ್ಬರು ಕುಸಿದುಬಿದ್ದ ಕಾರಣ, ಕಡೇ ಹಂತದಲ್ಲಿ ಸುಮಾರು 20 ಮತಗಳ ಎಣಿಕೆಯನ್ನು ಕೈಬಿಡಲಾಯಿತು.

ರಿಯಲ್‌ ಎಸ್ಟೇಟ್‌ ಉದ್ಯಮಿಯ ಗೆಲುವಿನೊಂದಿಗೆ ಆಯ್ಕೆ ಕುರಿತಂತೆ ಕಳೆದೊಂದು ತಿಂಗಳಿನಿಂದ ಇದ್ದ ಕುತೂಹಲ, ಸದಸ್ಯರ ಖರೀದಿ ಯತ್ನ, ಕಾನೂನು ಹೋರಾಟ ಅಂತ್ಯಗೊಂಡಂತಾಗಿದೆ.

ಸ್ರೆಥಾ ಅವರು 11 ಪಕ್ಷಗಳ ಮೈತ್ರಿಕೂಟ ಮುನ್ನಡೆಸಲಿದ್ದು, ಇದರಲ್ಲಿ ಸೇನೆ ಪರವಿರುವ ಹಾಗೂ ನಿರ್ಗಮಿತ ಪ್ರಧಾನಿ ಪ್ರಯುತ್‌ ಚನ್‌ ಒಚಾ ಅವರ ಜೊತೆಗೆ ಗುರುತಿಸಿಕೊಂಡಿರುವ ಎರಡು ಪಕ್ಷಗಳು ಸೇರಿವೆ. ಮೂವ್ ಫಾರ್ವರ್ಡ್ ಪಕ್ಷವು ಈ ಮೈತ್ರಿಯಲ್ಲಿ ಸೇರಿಲ್ಲ. ಫಲಿತಾಂಶ ಘೋಷಣೆಯ ಬೆನ್ನಲ್ಲೇ ಫ್ಯೂ ಥಾಯ್ ಪಕ್ಷದ ಕಚೇರಿ ಬಳಿ ಬೆಂಬಲಿಗರು ಕುಣಿದು ಸಂಭ್ರಮಿಸಿದರು.

ಸೆನೆಟ್‌, ಇತರೆ ಪಕ್ಷಗಳಿಂದ ಅಭ್ಯರ್ಥಿ ಅಗತ್ಯ ಬೆಂಬಲ ಪಡೆಯಲು ಆಗದಿದ್ದಾಗ, ಪ್ರಧಾನಿ ಆಯ್ಕೆಗೆ ಸಂಸತ್ತಿನ ಉಭಯ ಸದನಗಳ ಸದಸ್ಯರು ಹಕ್ಕು ಚಲಾಯಿಸುವ ವ್ಯವಸ್ಥೆ ರೂಪಿಸಲಾಯಿತು. ಸೇನಾ ಬೆಂಬಲಿತ ಆಡಳಿತವನ್ನು ರಕ್ಷಿಸುವುದು ಇದರ ಗುರಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT