ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ರಾಷ್ಟ್ರೀಯ ಸಿಖ್‌ ದಿನಾಚರಣೆಗೆ ನಿರ್ಣಯ ಮಂಡನೆ

Last Updated 31 ಮಾರ್ಚ್ 2022, 12:13 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದಲ್ಲಿ ಪ್ರತಿ ವರ್ಷ ಏಪ್ರಿಲ್‌ 14 ಅನ್ನು ರಾಷ್ಟ್ರೀಯ ಸಿಖ್‌ ದಿನಾಚರಣೆಯನ್ನಾಗಿ ಆಚರಿಸಲು ಸಂಸತ್‌ನಲ್ಲಿ ರಾಜ್‌ಕೃಷ್ಣಮೂರ್ತಿ ಸೇರಿದಂತೆ ಭಾರತ ಮೂಲದ ಅಮೆರಿಕದ 12ಕ್ಕೂ ಹೆಚ್ಚು ಜನಪ್ರತಿನಿಧಿಗಳು ನಿರ್ಣಯ ಮಂಡಿಸಿದ್ದಾರೆ.

ಶತಮಾನದ ಹಿಂದೆಯೇ ಅಮೆರಿಕಕ್ಕೆ ವಲಸೆ ಬಂದಿರುವ ಸಿಖ್‌ ಸಮುದಾಯವೂ ದೇಶದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದೆ. ಈ ಜನಾಂಗಕ್ಕೆ ಗೌರವ ಸೂಚಿಸುವ ಸಲುವಾಗಿ ರಾಷ್ಟ್ರೀಯ ಸಿಖ್‌ ದಿನವನ್ನುಆಚರಿಸಲು ಈ ನಿರ್ಣಯ ಮಂಡಿಸಲಾಗಿದೆ.

ಮಹಿಳಾ ಜನಪ್ರತಿನಿಧಿ ಮೇರಿ ಗೇ ಸ್ಕ್ಯಾನ್ಲಾನ್‌ ಪ್ರಾಯೋಜಕತ್ವ ಹಾಗೂ ಆರು ಮಂದಿ ಪ್ರತಿನಿಧಿಗಳ ಸಹ ಪ್ರಾಯೋಜಕತ್ವದಲ್ಲಿ ಸಂಸತ್‌ನಲ್ಲಿ ನಿರ್ಣಯವನ್ನು ಮಂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT