ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರ್ಕ್‌ ಪುನಶ್ಚೇತನ ಅಗತ್ಯ: ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥ ಯೂನಸ್

Published : 6 ಸೆಪ್ಟೆಂಬರ್ 2024, 12:42 IST
Last Updated : 6 ಸೆಪ್ಟೆಂಬರ್ 2024, 12:42 IST
ಫಾಲೋ ಮಾಡಿ
Comments

ಢಾಕಾ: ಪ್ರಾದೇಶಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್‌) ಪುನಶ್ಚೇತನ ಅಗತ್ಯ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್‌ ಪ್ರತಿಪಾದಿಸಿದ್ದಾರೆ.

ಎಂಟು ರಾಷ್ಟ್ರಗಳನ್ನು ಒಳಗೊಂಡಿರುವ ಸಾರ್ಕ್‌ಅನ್ನು ದೊಡ್ಡ ಉದ್ದೇಶಕ್ಕಾಗಿ ರಚಿಸಲಾಗಿತ್ತು. ಆದರೆ ಈಗ ಅದು ಕಾಗದದ ಮೇಲೆ ಮಾತ್ರ ಉಳಿದುಕೊಂಡಿದ್ದು, ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಶುಕ್ರವಾರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಹಲವು ಪ್ರಾದೇಶಿಕ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಸಾರ್ಕ್‌ಗೆ ಇದೆ. ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಹಾ ಅಧಿವೇಶನದ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಸಾರ್ಕ್‌ ಪುನರುಜ್ಜೀವನದ ಕುರಿತು ಮಾತನಾಡಲು ಬಯಸಿದ್ದೇನೆ’ ಎಂದು ತಿಳಿಸಿದರು.

‘ಬಹು ದಿನಗಳಿಂದ ಸಾರ್ಕ್‌ ಶೃಂಗಸಭೆ ನಡೆಯುತ್ತಿಲ್ಲ. ನಾವು ಮತ್ತೆ ಒಗ್ಗಟ್ಟು ಪ್ರದರ್ಶಿಸಬೇಕು. ಸಾರ್ಕ್‌ನ ಎಲ್ಲ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರನ್ನು ಜತೆಯಲ್ಲಿ ನಿಲ್ಲಿಸಿ ಫೋಟೊ ಶೂಟ್‌ ಮಾಡಲು ಪ್ರಯತ್ನಿಸುತ್ತೇನೆ’ ಎಂದರು.

ಸಾರ್ಕ್‌ ಬಣವು ಅಫ್ಗಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ದೀವ್ಸ್‌, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಒಗೊಂಡಿದೆ.

2014ರಲ್ಲಿ ಕಾಠ್ಮಂಡುವಿನಲ್ಲಿ ನಡೆದ ಸಭೆಯ ಬಳಿಕ ಸಾರ್ಕ್‌ ದ್ವೈವಾರ್ಷಿಕ ಶೃಂಗಸಭೆ ನಡೆದೇ ಇಲ್ಲ. 2016ರ ಶೃಂಗಸಭೆ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿತ್ತು. ಆದರೆ ಅದೇ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದ ಕಾರಣ ಭಾರತವು ಶೃಂಗಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿತ್ತು. ಅದರ ಬೆನ್ನಲ್ಲೇ ಬಾಂಗ್ಲಾದೇಶ, ಭೂತಾನ್‌ ಮತ್ತು ಅಫ್ಗಾನಿಸ್ತಾನ ಕೂಡಾ ಹಿಂದೆ ಸರಿದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT