ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದಲ್ಲಿ ಪ್ರವಾಹದ ಭೀತಿ: 4000 ಜನರ ಸ್ಥಳಾಂತರ

Published 7 ಏಪ್ರಿಲ್ 2024, 15:16 IST
Last Updated 7 ಏಪ್ರಿಲ್ 2024, 15:16 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾದ ಪ್ರವಾಹಬಾಧಿತ ಓರಿಯನ್‌ಬರ್ಗ್‌ ವಲಯದಲ್ಲಿ ಸರ್ಕಾರ ತುರ್ತುಪರಿಸ್ಥಿತಿ ಘೋಷಿಸಿದೆ. ಉರಲ್‌ ನದಿಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚುತ್ತಿದೆ. ಪ್ರವಾಹದಿಂದಾಗಿ 885 ಮಕ್ಕಳು ಸೇರಿದಂತೆ ಸುಮಾರು 4000 ಜನರು ಅತಂತ್ರರಾಗಿದ್ದು, ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ. 

ಸ್ಥಳೀಯ ಮಾಧ್ಯಮ ಸಂಸ್ಥೆ ‘ಟಾಸ್‌’ ಪ್ರಕಾರ, ಈ ವಲಯದಲ್ಲಿ ಪ್ರವಾಹದಿಂದಾಗಿ ಸುಮಾರು 6,300 ಮನೆಗಳು ಜಲಾವೃತವಾಗಿವೆ. ಸಚಿವ ಅಲೆಕ್ಸಾಂಡರ್ ಕುರೆನ್‌ಕೊವ್ ಅವರು ಖುದ್ದು ಪರಿಹಾರದ ಉಸ್ತುವಾರಿ ವಹಿಸಿದ್ದಾರೆ.

ಕಜಕಿಸ್ತಾನದಿಂದ 20 ಕಿ.ಮೀ. ದೂರದಲ್ಲಿರುವ ಗಡಿ ಭಾಗದಲ್ಲಿ ಪ್ರವಾಹದ ಪರಿಣಾಮ ತೀವ್ರವಾಗಿದೆ. ಅಣೆಕಟ್ಟೆಯಲ್ಲಿ ಬಿರುಕು ಕಾಣಿಸಿದೆ. ಬಾಧಿತ ಸ್ಥಳಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಒತ್ತು ನೀಡಲಾಗಿದೆ.

ಅಣೆಕಟ್ಟೆಯಲ್ಲಿ ಬಿರುಕು ಕಾಣಿಸಿಲು ನಿರ್ಮಾಣದಲ್ಲಿನ ಲೋಪ ಕಾರಣವೇ ಎಂದು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ಅಣೆಕಟ್ಟೆ ಸಾಮರ್ಥ್ಯ 18 ಅಡಿ. ಶನಿವಾರ ಬೆಳಿಗ್ಗೆ 30 ಅಡಿವರೆಗೂ ತಲುಪಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓಸ್ಕ್‌ ನಗರದ ಅಧಿಕಾರಿಗಳು, ಭಾನುವಾರ ನಾಲ್ವರು ಮೃತಪಟ್ಟಿದ್ದಾರೆ. ಆದರೆ, ಸಾವಿಗೂ ಪ್ರವಾಹಕ್ಕೂ ಸಂಬಂಧವಿಲ್ಲ. ನಗರದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. 1300ಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT