ಲಂಡನ್: ಬ್ರಿಟನ್ ಹಾಗೂ ಅಮೆರಿಕ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ, ರಷ್ಯಾ ಧ್ವಜ ಹೊಂದಿದ್ದ ತೈಲ ಹಡಗನ್ನು ವಶಪಡಿಸಿಕೊಂಡಿವೆ. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಿದರು.

‘ಬೆಲ್ಲಾ 1’ ಹಡಗನ್ನು ವಶಪಡಿಸಿಕೊಂಡ ಕಾರ್ಯಾಚರಣೆ, ಉಕ್ರೇನ್ನಲ್ಲಿ ಇತ್ತೀಚೆಗೆ ನಡೆದ ಬದಲಾವಣೆಗಳು ಹಾಗೂ ವೆನಿಜುವೆಲಾದಲ್ಲಿ ಅಮೆರಿಕದ ಕಾರ್ಯಾಚರಣೆ ಬಗ್ಗೆ ಉಭಯ ನಾಯಕರು ಬುಧವಾರ ಸಂಜೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು ಎಂದು ಪ್ರಧಾನಿ ಕೀರ್ ಸ್ಟಾರ್ಮರ್ ಕಚೇರಿ ತಿಳಿಸಿದೆ.

ಕಾರ್ಯಾಚರಣೆಗೆ ಸಹಾಯ ಮಾಡುವಂತೆ ಅಮೆರಿಕವು ಬ್ರಿಟನ್ ಅನ್ನು ಕೋರಿತ್ತು. ಇದಕ್ಕೆ ಸ್ಪಂದಿಸಿದ ಬ್ರಿಟನ್, ಕಣ್ಗಾವಲು ವಿಮಾನ ಹಾಗೂ ಹಡಗನ್ನು ನಿಯೋಜಿಸಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

‘ಅಮೆರಿಕಕ್ಕೆ ಬ್ರಿಟನ್ನ ಬೆಂಬಲವು ಅಂತರರಾಷ್ಟ್ರೀಯ ಕಾನೂನಿನ ಅನುಸರಣೆಯಾಗಿದೆ. ಉಭಯ ದೇಶಗಳ ರಕ್ಷಣಾ ಹಾಗೂ ಭದ್ರತಾ ಸಂಬಂಧಗಳು ವಿಶ್ವದಲ್ಲಿಯೇ ಅತ್ಯಂತ ಆಳವಾದದ್ದು’ ಎಂದು ರಕ್ಷಣಾ ಕಾರ್ಯದರ್ಶಿ ಜಾನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.