ಮಾಸ್ಕೊ: ಹತ್ತಕ್ಕೂ ಅಧಿಕ ಆಕ್ರಮಣಕಾರಿ ಹಿಮಕರಡಿಗಳು ಮನೆ ಹಾಗೂ ಸಾರ್ವಜನಿಕ ಕಟ್ಟಡಗಳಿಗೆ ಶನಿವಾರ ಏಕಾಏಕಿ ನುಗ್ಗಿದ್ದರಿಂದ ರಷ್ಯಾದ ಆರ್ಕ್ಟಿಕ್ ದ್ವೀಪಸಮೂಹದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

‘ರಷ್ಯಾದ ಈಶಾನ್ಯದಲ್ಲಿರುವ ನೊವಾಯ ಝೆಮ್ಲ್ಯಾ ದ್ವೀಪದಲ್ಲಿ ಸುಮಾರು 3 ಸಾವಿರ ಮಂದಿ ನೆಲೆಸಿದ್ದಾರೆ. ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಹಿಮಕರಡಿಗಳು ಜನವಸತಿ ಪ್ರದೇಶಕ್ಕೆ ನುಗ್ಗಿವೆ’ ಎಂದು ಅಧಿಕಾರಿಗಳು ತಿಳಿಸಿದರು.

ಹಿಮಕರಡಿ ಕೊಲ್ಲಲು ರಷ್ಯಾದ ಅಧಿಕಾರಿಗಳು ಇದುವರೆಗೂ ಅನುಮತಿ ನೀಡಿಲ್ಲ. ಆದರೆ, ಪರಿಸ್ಥಿತಿ ಕುರಿತಂತೆ ಪರಾಮರ್ಶೆ ನಡೆಸಲು ಉನ್ನತ ಮಟ್ಟದ ತನಿಖೆ ನಡೆಸಲು ಸಮಿತಿಯೊಂದನ್ನು ಕಳುಹಿಸಲು ನಿರ್ಧರಿಸಿದೆ.

ಜಾಗತಿಕ ಹವಾಮಾನ ಪರಿಣಾಮ: ಜಾಗತಿಕ ತಾಪಮಾನದಿಂದ ಆರ್ಕ್ಟಿಕ್ ದ್ವೀಪ ಸಮೂಹವು ಅತ್ಯಂತ ವೇಗದಲ್ಲಿ ಕರಗುತ್ತಿದ್ದು, ಇದರಿಂದ ಆಹಾರ ಅರಸಿಕೊಂಡು ಭೂಮಿಯತ್ತ ವಲಸೆ ಬರುತ್ತಿವೆ.

ಹಿಮಕರಡಿಗಳು ಅಳಿವಿನಂಚಿನಲ್ಲಿರುವ ಜೀವಿಗಳು ಎಂದು ಪರಿಗಣಿಸಲಾಗಿದ್ದು, ಅವುಗಳ ಹತ್ಯೆಯನ್ನು ನಿಷೇಧಿಸಲಾಗಿದೆ.ನೊವಾಯ ಝೆಮ್ಲ್ಯಾ ದ್ವೀಪದಲ್ಲಿ ರಷ್ಯಾ ವಾಯುನೆಲೆಯನ್ನು ಹೊಂದಿದೆ.

‘6ರಿಂದ 8 ಕರಡಿಗಳು ಮನೆಗಳು ನುಗ್ಗಿವೆ. ಇದರಿಂದ ಜನರು ಭೀತಿಗೆ ಒಳಗಾಗಿದ್ದು, ಅಲ್ಲಿಂದ ಹೊರ ನಡೆದಿದ್ದಾರೆ. ಮಕ್ಕಳು ಶಾಲೆಗಳಲ್ಲೇ ಉಳಿದಿದ್ದಾರೆ’ ಎಂದು ಸ್ಥಳೀಯ ಆಡಳಿತ ಮುಖ್ಯಸ್ಥ ಝಿಂಗ್ಸಾ ಮುಸಿನ್ ತಿಳಿಸಿದರು.

ಹಿಮಕರಡಿಗಳು ಸೇನಾ ಕಚೇರಿಗೆ ನುಗ್ಗಿದ್ದರಿಂದ ಬಳಕೆಯಾಗದ ಇಲ್ಲಿದ್ದ ಹಲವು ಕಟ್ಟಡಗಳನ್ನು ಈಗಾಗಲೇ ಧ್ವಂಸಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.