ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ದಶಕ, 93 ಕೊಲೆ: ಅಮೆರಿಕದ ಸರಣಿ ಹಂತಕ ಸ್ಯಾಮ್ಯುಯೆಲ್ ಲಿಟ್ಟಲ್‌ ಸಾವು

Last Updated 31 ಡಿಸೆಂಬರ್ 2020, 5:10 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಇತಿಹಾಸದಲ್ಲಿ ಸರಣಿ ಹಂತಕ ಎಂದೇ ಕುಖ್ಯಾತಿ ಪಡೆದಿದ್ದ ಸ್ಯಾಮ್ಯುಯೆಲ್ ಲಿಟ್ಟಲ್‌ (80) ಇಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಹಲವು ಕೊಲೆ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಸ್ಯಾಮ್ಯುಯೆಲ್ ಜೈಲಿನಲ್ಲಿದ್ದ. ಅನಾರೋಗ್ಯ ಕಾರಣ ಇಲ್ಲಿನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಯಾಮ್ಯುಯೆಲ್, 4 ದಶಕಗಳಲ್ಲಿ ಅಮೆರಿಕದ 19 ರಾಜ್ಯಗಳಲ್ಲಿ 93 ಜನರನ್ನು ಹತ್ಯೆ ಮಾಡಿದ್ದ. ಇವನನ್ನು 2014ರಲ್ಲಿ ಪೊಲೀಸರು ಬಂಧಿಸಿದ್ದರು. ಇವನ ಸಾಕಷ್ಟು ಕೊಲೆ ಪ್ರಕರಣಗಳಲ್ಲಿ ಸಾಕ್ಷಿಗಳ ಕೊರತೆ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

2014ರಲ್ಲಿ ನಡೆದ ಮೂರು ಕೊಲೆ ಪ್ರಕರಣಗಳಲ್ಲಿ ಸ್ಯಾಮ್ಯುಯೆಲ್ ಡಿಎನ್‌ಎ ಹೊಂದಾಣಿಕೆಯಾಗಿತ್ತು. 93 ಜನರನ್ನು ಹತ್ಯೆ ಮಾಡಿರುವುದಾಗಿ ನ್ಯಾಯಾಲಯದ ಎದುರು ತಪ್ಪು ಒಪ್ಪಿಕೊಂಡಿದ್ದ. ಇವನ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು 60ಕ್ಕೂ ಹೆಚ್ಚು ಸಂತ್ರಸ್ತರ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಕೆಲವರ ಮಾಹಿತಿ ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಯಾಮ್ಯುಯೆಲ್ ಕ್ರೂರತ್ವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಬಲಿಯಾಗಿದ್ದಾರೆ. ಇವರೆಲ್ಲ ಬಡವರು ಹಾಗೂ ಡ್ರಗ್ಸ್‌ ಮಾರುತ್ತಿದ್ದರು. ಮೃತರ ಪೈಕಿ ಕಪ್ಪು ವರ್ಣಿಯರೇ ಹೆಚ್ಚು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT