ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾದಲ್ಲಿ ಅಮೆರಿಕ ಡ್ರೋಣ್ ದಾಳಿ; ಅಲ್‌ ಕೈದಾ ಉಗ್ರ ಸಂಘಟನೆ ಹಿರಿಯ ನಾಯಕ ಹತ್ಯೆ

Last Updated 23 ಅಕ್ಟೋಬರ್ 2021, 5:50 IST
ಅಕ್ಷರ ಗಾತ್ರ

ವಾಷಿಂಗ್ಟನ್: ಸಿರಿಯಾದಲ್ಲಿ ಅಮೆರಿಕ ಸೇನೆ ನಡೆಸಿದ ಡ್ರೋಣ್‌ ದಾಳಿಯಲ್ಲಿ ಅಲ್‌-ಕೈದಾ ಉಗ್ರ ಸಂಘಟನೆಯ ಹಿರಿಯ ನಾಯಕ ಹತ್ಯೆಯಾಗಿದ್ದಾನೆ ಎಂದು ಪೆಂಟಗಾನ್‌ತಿಳಿಸಿದೆ.

ಇಸ್ಲಾಮಿಕ್‌ ಸ್ಟೇಟ್ ಸಂಘಟನೆ ವಿರುದ್ಧ ಹೋರಾಟ ನಡೆಸುತ್ತಿದ್ದ ಅಮೆರಿಕ ನೇತೃತ್ವದ ಸೇನಾ ಪಡೆಗಳು ಬಳಸುತ್ತಿದ್ದದಕ್ಷಿಣ ಸಿರಿಯಾದ ನೆಲೆಯ ಮೇಲೆಎರಡು ದಿನಗಳ ಹಿಂದಷ್ಟೇ ದಾಳಿ ನಡೆದಿತ್ತು. ಈ ಹಿನ್ನಲೆಯಲ್ಲಿ‌ ದಾಳಿ ನಡೆಸಲಾಗಿದೆ.

ʼಸಿರಿಯಾದ ವಾಯುವ್ಯ ಪ್ರದೇಶದಲ್ಲಿ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಅಲ್‌-ಕೈದಾ ಹಿರಿಯ ನಾಯಕ ಅಬ್ದುಲ್‌ ಹಮೀದ್‌ ಅಲ್-ಮತರ್‌ ಹತ್ಯೆಯಾಗಿದ್ದಾನೆʼ ಎಂದು ಕೇಂದ್ರ ಕಮಾಂಡ್‌ನ ವಕ್ತಾರ, ಮೇಜರ್‌ ಜಾನ್‌ ರಿಗ್‌ಸ್ಬೀ ಹೇಳಿಕೆ ನೀಡಿದ್ದಾರೆ.

ʼಹಿರಿಯ ನಾಯಕನ ಹತ್ಯೆಯಿಂದ ಜಾಗತಿಕ ದಾಳಿ ಸಂಘಟಿಸುವ, ಸಂಚು ರೂಪಿಸುವ ಅಲ್‌-ಕೈದಾ ಸಾಮರ್ಥ್ಯಕ್ಕೆ ಹಿನ್ನಡೆಯಾಗಲಿದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಂಕ್ಯೂ-9 ವಿಮಾನ ಬಳಸಿ ಈ ದಾಳಿನಡೆಸಲಾಗಿದೆ ಎಂದು ತಿಳಿಸಿರುವ ರಿಗ್‌ಸ್ಬೀ, ಅಮೆರಿಕ ಹಾಗೂ ಮತ್ತದರ ಮಿತ್ರ ರಾಷ್ಟ್ರಗಳಿಗೆ ಅಲ್‌-ಕೈದಾ ಬೆದರಿಕೆ ಒಡ್ಡುತ್ತಲೇ ಇದೆ. ಸಂಘಟನೆಯನ್ನುಪುನಃ ಕಟ್ಟಲು, ಹೊರಗಿನ ಅಂಗಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ಬಾಹ್ಯ ಕಾರ್ಯಾಚರಣೆಗಳಿಗೆ ಯೋಜನೆ ರೂಪಿಸಲುಸಿರಿಯಾವನ್ನು ಸುರಕ್ಷಿತ ತಾಣವಾಗಿ ಬಳಸುತ್ತಿದೆʼ ಎಂದೂ ಹೇಳಿದ್ದಾರೆ.

ಸಂಘಟನೆಯ ಇನ್ನೊಬ್ಬ ನಾಯಕ ಸಲೀಂ ಅಬು-ಅಹ್ಮದ್‌ ಎಂಬಾತನನ್ನು ಅಮೆರಿಕ ಸೇನೆ ಸೆಪ್ಟೆಂಬರ್‌ ಅಂತ್ಯದಲ್ಲಿ ಹತ್ಯೆ ಮಾಡಿತ್ತು.

ಸಿರಿಯಾ ಹಾಗೂ ವಿದೇಶಿ ಸೇನೆಗಳು ಮತ್ತು ಜಿಹಾದಿಗಳ ನಡುವಿನ ಘರ್ಷಣೆಯಿಂದ ಸದ್ಯ ಸಿರಿಯಾ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT