ಅಲ್ಬುಕರ್ಕ್(ಅಮೆರಿಕ): ನ್ಯೂ ಮೆಕ್ಸಿಕೊದ ಅಮೆರಿಕ ವಾಯುನೆಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಒಬ್ಬ ಏರ್ಮ್ಯಾನ್ ಸಾವಿಗೀಡಾಗಿದ್ದು, ಇನ್ನೊಬ್ಬ ಗಾಯಗೊಂಡಿದ್ದಾನೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. ಇದು ಭಯೋತ್ಪಾದನೆಯ ಅಥವಾ ಹೊರಗಿನವರ ಕೃತ್ಯವಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

ಬೆಳಗಿನ ಜಾವ 2 ಗಂಟೆ ಸುಮಾರಿಗೆ ವಾಯುನೆಲೆಯ ಪ್ರವೇಶ ದ್ವಾರದ ಬಳಿ ನಡೆದ ಗುಂಡಿನ ದಾಳಿಗೆ ಭದ್ರತಾ ಪಡೆಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ. ಒಬ್ಬ ಏರ್ಮ್ಯಾನ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಮತ್ತು ಇನ್ನೊಬ್ಬನ ಕೈಗೆ ಗುಂಡೇಟು ತಗುಲಿದ್ದು, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಅಲ್ಬುಕರ್ಕ್ನಲ್ಲಿರುವ ಕಿರ್ಟ್ಲ್ಯಾಂಡ್ ಏರ್ ಫೋರ್ಸ್ ಬೇಸ್ನ ಹೇಳಿಕೆ ತಿಳಿಸಿದೆ.

ಯಾರನ್ನಾದರೂ ಬಂಧಿಸಲಾಗಿದೆಯೇ ಅಥವಾ ಮಿಲಿಟರಿ ಅಧಿಕಾರಿಗಳು ಶಂಕಿತರನ್ನು ಹುಡುಕುತ್ತಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಶೂಟರ್ ಅಥವಾ ಶೂಟರ್ಗಳು ಸಹ ಏರ್ಮೆನ್ಗಳೇ ಆಗಿದ್ದರೇ ಎಂಬ ಬಗ್ಗೆಯೂ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಗುಂಡಿನ ದಾಳಿಯಲ್ಲಿ ಮೃತಪಟ್ಟ, ಗಾಯಗೊಂಡ ಏರ್ಮ್ಯಾನ್ಗಳ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ.

ಎಫ್ಬಿಐ ತನಿಖಾಧಿಕಾರಿಗಳಿಗೆ ಅಲ್ಬುಕರ್ಕ್ ಪೊಲೀಸರು ನೆರವು ನೀಡುತ್ತಿದ್ದಾರೆ ಎಂದು ಪೊಲೀಸ್ ವಕ್ತಾರ ಗಿಲ್ಬರ್ಟ್ ಗ್ಯಾಲೆಗೋಸ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.