ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌: ರಾಜನಿಗೆ ತೊಡಿಸುವ ಕಿರೀಟ ಸಿದ್ಧ

Published 3 ಮೇ 2023, 15:44 IST
Last Updated 3 ಮೇ 2023, 15:48 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ ರಾಜ ಮೂರನೇ ಚಾರ್ಲ್ಸ್‌ ಅವರ ಪಟ್ಟಾಭಿಷೇಕವು ಇದೇ ಶನಿವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದು, ರಾಜನಿಗೆ ತೊಡಿಸುವ ಕಿರೀಟದ ಅಳತೆಯನ್ನು ಬದಲಿಸಲಾಗಿದೆ. 70 ವರ್ಷಗಳಲ್ಲೇ ಅತ್ಯಂತ ಅದ್ಧೂರಿಯಾಗಿ ನಡೆಯಲಿರುವ ಸೇನಾ ಮೆರವಣಿಗೆಗೆ ಬ್ರಿಟನ್‌ ಸೇನೆ ಸಿದ್ಧವಾಗುತ್ತಿದೆ. ರಾಜನ ಮೆರವಣಿಗೆಗೆ ಚಿನ್ನದ ಸಾರೋಟು ಕೂಡಾ ಸಿದ್ಧವಾಗಿದೆ. 

ಅಧಿಕಾರದ ಚಿಹ್ನೆಗಳಾದ ದಂಡ ಮತ್ತಿತರ ವಸ್ತುಗಳನ್ನು ಚಾರ್ಲ್ಸ್‌ ಅವರಿಗೆ ಧಾರ್ಮಿಕ ಗುರುಗಳು ಹಸ್ತಾಂತರಿಸಲಿದ್ದಾರೆ. ವಾದ್ಯ ತಂಡಗಳು ಮತ್ತು ಕರಡಿ ತುಪ್ಪಳದ ಟೋಪಿ ಧರಿಸಿದ ತಂಡಗಳು ಲಂಡನ್‌ ಬೀದಿಗಳಲ್ಲಿ ಮೆರವಣಿಗೆ ನಡೆಸಲಿವೆ.

ರಾಜ ಮತ್ತು ರಾಣಿ ಬಕ್ಕಿಂಗ್‌ಹ್ಯಾಮ್‌ ಅರಮನೆಯ ಬಾಲ್ಕನಿಯಲ್ಲಿ ನಿಂತು ಜನರತ್ತ ಕೈಬೀಸುವುದರೊಂದಿಗೆ ಈ ಸಮಾರಂಭ ಮುಕ್ತಾಯವಾಗಲಿದೆ ಎನ್ನಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT