ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಲಿ ಮಾಜಿ ಪ್ರಧಾನಿ ಸಿಲ್ವಿಯೊ ಬರ್ಲುಸ್ಕೋನಿ ನಿಧನ

Published 12 ಜೂನ್ 2023, 13:20 IST
Last Updated 12 ಜೂನ್ 2023, 13:20 IST
ಅಕ್ಷರ ಗಾತ್ರ

ರೋಮ್:‌ ಇಟಲಿಯ ಮಾಜಿ ಪ್ರಧಾನಿ, ಉದ್ಯಮಿ ಸಿಲ್ವಿಯೊ ಬರ್ಲುಸ್ಕೋನಿ (86) ಸೋಮವಾರ ನಿಧನರಾಗಿದ್ದಾರೆ.

ರಕ್ತದ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬರ್ಲುಸ್ಕೋನಿ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯ ಸಂಬಂಧಿ ಕಾಯಿಲೆ, ಪ್ರಾಸ್ಟೇಟ್ ಕ್ಯಾನ್ಸರ್‌ನಿಂದಲೂ ಬಳಲುತ್ತಿದ್ದರು. 2020ರಲ್ಲಿ ಕೋವಿಡ್ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು.

‘ಬರ್ಲುಸ್ಕೋನಿ ಮೃತಪಟ್ಟಿದ್ದಾರೆ’ ಎಂಬ ಶೀರ್ಷಿಕೆಯೊಂದಿಗೆ ಅವರ ಮೀಡಿಯಾಸೆಟ್ ಟೆಲಿವಿಷನ್ ನೆಟ್‌ವರ್ಕ್ ನಿಧನ ಸುದ್ಧಿ ಘೋಷಿಸಿದೆ.  

ಅವರು ಮೂರು ಬಾರಿ ದೇಶದ ಪ್ರಧಾನಿಯಾಗಿದ್ದರು.  1936, ಸೆಪ್ಟೆಂಬರ್ 29 ರಂದು ಮಿಲಾನ್‌ನಲ್ಲಿ ಬರ್ಲುಸ್ಕೋನಿ ಜನಿಸಿದರು. 25ನೇ ವಯಸ್ಸಿನಲ್ಲಿ ನಿರ್ಮಾಣ ಕಂಪನಿ ಪ್ರಾರಂಭಿಸಿದರು.  

ಚಲನಚಿತ್ರ ಹಕ್ಕುಗಳ ಮಾರಾಟ ತೆರಿಗೆ ವಂಚನೆ ಪ್ರಕರಣದಲ್ಲಿ ನ್ಯಾಯಾಲಯ ಅವರಿಗೆ ಶಿಕ್ಷೆ ವಿಧಿಸಿತ್ತು.  ಇಟಲಿಯ ಉನ್ನತ ಕ್ರಿಮಿನಲ್ ನ್ಯಾಯಾಲಯ 2013ರಲ್ಲಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಆದರೆ, ಅವರ ವಯಸ್ಸು 76 ಆಗಿದ್ದ ಕಾರಣ ಜೈಲು ಶಿಕ್ಷೆ ಬದಲು ಅಲ್ಝೈಮರ್ ರೋಗಿಗಳಿಗೆ ಸಹಾಯ ಮಾಡುವ ಮೂಲಕ ಸಮುದಾಯ ಸೇವೆ ಮಾಡಲು ಆದೇಶಿಸಿತು.

1965 ರಲ್ಲಿ ಕಾರ್ಲಾ ಡಾಲ್'ಒಗ್ಲಿಯೊ ಅವರನ್ನು ಬರ್ಲುಸ್ಕೋನಿ ವಿವಾಹವಾದರು. ಮರೀನಾ, ಪಿಯರ್ಸಿಲ್ವಿಯೊ ಎಂಬ ಮಕ್ಕಳಿದ್ದಾರೆ. ಎರಡನೇ ಮದುವೆ 1990ರಲ್ಲಿ ವೆರೋನಿಕಾ ಲ್ಯಾರಿಯೊ  ಅವರೊಂದಿಗೆ ನಡೆಯಿತು.  ಅವರಿಗೆ ಬಾರ್ಬರಾ, ಎಲಿಯೊನೊರಾ ಮತ್ತು ಲುಯಿಗಿ ಎಂಬ ಮೂವರು ಮಕ್ಕಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT