ಸಿಂಗಪುರ: ಕೊರೊನಾ ಸೋಂಕು ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಂಡಿರುವ ಸಿಂಗಪುರ, ಆಗಸ್ಟ್ 9 ಮತ್ತು 21ರಂದು ನಡೆಯಬೇಕಿದ್ದ ರಾಷ್ಟ್ರೀಯ ದಿನದ ಪಥಸಂಚಲನವನ್ನು ಮುಂದೂಡಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ರಾಷ್ಟ್ರದ 56ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇವಲ ವೇದಿಕೆ ಸಮಾರಂಭವನ್ನು ನಡೆಸಲಿದೆ. ಮತ್ತೊಂದು ಪ್ರಮುಖ ಕಾರ್ಯಕ್ರಮವಾದ ರಾಷ್ಟ್ರೀಯ ದಿನದ ರ್‍ಯಾಲಿಯನ್ನು ಒಂದು ವಾರದವರೆಗೆ ಅಂದರೆ ಆಗಸ್ಟ್ 29ಕ್ಕೆ ಮುಂದೂಡಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವರು.

ಸಾರ್ವಜನಿಕವಾಗಿ ಈ ಹಿಂದೆ ಐವರು ಗುಂಪುಗೂಡಲು ಅವಕಾಶ ಇತ್ತು. ಈಗ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಆಗಸ್ಟ್ 18ರವರೆಗೆ ಈ ನಿಯಮ ಮುಂದುವರಿಯಲಿದೆ. ಗುರುವಾರ ಇಲ್ಲಿ 170 ಹೊಸ ಪ್ರಕರಣಗಳು ವರದಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.